ಗದಗ : ಈ ಅನ್ನದಾತನಿಗೆ ಕೃಷಿಯಲ್ಲಿ ಏನಾದ್ರೂ ಸಾಧನೆ ಮಾಡಬೇಕೆಂಬ ಹಂಬಲಕ್ಕೆ ಪರಿಸ್ಥಿತಿ ಕೈಗೂಡಬೇಕಲ್ಲಾ, ಕೃಷಿಗೆ ಬೇಕಾದ ಅಗತ್ಯ ಸೌಕರ್ಯ ಸಿಗಬೇಕಲ್ಲಾ ಅದೆಲ್ಲಾ ಸಿಕ್ರೆ ಅನ್ನದಾತ ಕೃಷಿಯಲ್ಲೇ ಕೈಲಾಸ ಸೃಷ್ಟಿಸಬಲ್ಲ ಎಂಬ ಮಾತಿಗೆ ಇಲ್ಲೋಬ್ಬ ರೈತರು ಉದಾಹರಣೆ ಆಗಿದ್ದಾರೆ.
ಹೌದು ! ಗದಗ ಜಿಲ್ಲೆಯ ಮದಗಾನೂರ ಗ್ರಾಮದ ರೈತ ತನ್ನ 4 ಎಕರೆ 12 ಗುಂಟೆ ಜಮೀನಿನಲ್ಲಿ ಒಣ ಬೇಸಾಯದ ಮಾರ್ಗದಲ್ಲಿ ಆರಕ್ಕೆ ಏರದ ಮೂರಕ್ಕೆ ಇಳಿಯದ ಆದಾಯದ ಹೊಸ್ತಿಲಲ್ಲಿ ಕೃಷಿ ಮಾಡುವಾಗ ವರವಾಗಿ ಬಂದದ್ದೇ, ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣ ಯೋಜನೆ.
ಎಸ್.! ರೈತ ಬಸಲಿಂಗನಗೌಡ ಶೇಖರಗೌಡ ಪಾಟೀಲ ತಮ್ಮ 4 ಎಕರೆ 12 ಗುಂಟೆ ಜಮೀನಿನಲ್ಲಿ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಅಪ್ಪಟ ಬೆಳೆ ಬೆಳೆದು ಇದೀಗ, ಮಳೆ ಕಡಿಮೆಯಾದರೂ ಹಿಂಗಾರು ಬೆಳೆಗೆ ನೀರಿನ ಬರ ಉಂಟಾದರೂ ಕೃಷಿಹೊಂಡ ಇದೆ ಎಂಬ ಧೈರ್ಯ ಹೊಂದಿದ್ದು ಉತ್ತಮ ಬೆಳೆ ತೆಗೆಯುತ್ತೇನೆ ಎಂಬ ವಿಶ್ವಾಸ ಹೊಂದಿದ್ದಾರೆ.
ಈಗಾಗಲೇ ಕೃಷಿಹೊಂಡ ಆಶ್ರಿತವಾಗಿ ಮುಂಗಾರು ಶೇಂಗಾ, ಹೆಸರು, ಬೆಳೆದ ರೈತ ಹಿಂಗಾರು ಗೋಧಿ, ಕಡಲೆ, ಜೋಳದ ಬೆಳೆ ಬೆಳೆದಿದ್ದಾರೆ, ಒಣ ಬೇಸಾಯದ ಆದಾಯಕ್ಕಿಂತ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ಆಶ್ರಿತ ಬೇಸಾಯ ಮಾಡಿ 3 ಲಕ್ಷದ ಸನಿಹ ಆದಾಯದ ನಂಬಿಕೆ ಹೊಂದಿದ್ದಾರೆ.
ಒಟ್ಟಿನಲ್ಲಿ ಅರೆ ಬರೆ ಆದಾಯದ ಕಷ್ಟದ ಬದುಕಿಗೆ, ವರವಾದ ದೇಶಪಾಂಡೆ ಫೌಂಡೇಶನ್ ಕೃಷಿಹೊಂಡ ಯೋಜನೆ ಬಸಲಿಂಗನಗೌಡರಂತಹ ಅದೆಷ್ಟೋ ಸಣ್ಣ ಸಣ್ಣ ರೈತರಿಗೂ ವರವಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/01/2022 09:39 pm