ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಇಳಿ ವಯಸ್ಸಿನಲ್ಲೂ ಕೃಷಿಯಿಂದ ನಿವೃತ್ತಿ ಪಡೆಯದ ಬೇಸಾಯಗಾರ ಬಸವರಾಜ

ನವಲಗುಂದ: ತಮ್ಮ 64ರ ಇಳಿ ವಯಸ್ಸಿನಲ್ಲೂ ಬತ್ತದ ಕೃಷಿ ಪ್ರೇಮ, ಜಾನುವಾರುಗಳ ಪ್ರೀತಿ, ಕೃಷಿ ಬದುಕಿನಲ್ಲೇ ಹೊಸ ವಾತ್ಸಲ್ಯ ಕಾಣಬೇಕೆಂಬ ಉತ್ಸಾಹದ ಕೃಷಿಕರೇ ನವಲಗುಂದ ತಾಲೂಕಿನ ಶಾನವಾಡ ಗ್ರಾಮದ ರೈತ ಬಸವರಾಜ ಹೊಂಡೇದ್.

ಯಾವುದೋ ಒಂದು ಹುದ್ದೆ ನಿರ್ವಹಿಸುತ್ತಾ ಅಬ್ಬಾ ಅರವತ್ತಾಯ್ತು, ಇನ್ನೂ ನಿವೃತ್ತಿ ಪಡೆಯೋಣ ಎನ್ನುವವರ ನಡುವೆ ಈ ರೈತ ಬಸವರಾಜ ಹೊಂಡೇದ್ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡು ಹೊಸ ಕೃಷಿ ವೃತ್ತಿ ಆರಂಭಿಸಿ ಮಣ್ಣಲ್ಲೇ ಅನ್ನ ಬೆಳೆದು ಚಿನ್ನದ ಆದಾಯ ಗಳಿಸಿದ್ದಾರೆ.

ತಮ್ಮ ಆರು ಎಕರೆ ಭೂಮಿಯಲ್ಲಿ 400/250 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡ ಇವರು ಮುಂಗಾರು ಹೆಸರು, ಗೋವಿನಜೋಳ, ಈರುಳ್ಳಿ, ಸೂರ್ಯಕಾಂತಿ, ಕಬ್ಬು ಬೆಳೆದ ರೈತ ಬಸವರಾಜ ಹೊಂಡೇದ್ ಈ ಬಾರಿ ಹಿಂಗಾರು ಕಡಲೆ, ಗೋಧಿ, ಬಿತ್ತನೆ ಕಾರ್ಯ ಕೈಗೊಂಡು ಮುಂಗಾರು ಬೆಳೆಯಲ್ಲಿ 5 ಲಕ್ಷ ಹಣವನ್ನು ಸಂಪಾದನೆ ಮಾಡಿದ್ದಾರೆ.

ಇನ್ನೂ ಒಣ ಬೇಸಾಯ ಶ್ರಮ ಕಡಿಮೆಯಾದರೂ, ರೈತ ನಿರೀಕ್ಷೆ ಇಟ್ಟ ಆದಾಯ ಬಾರದ ಹಿನ್ನೆಲೆಯಲ್ಲಿ ಜನ ಕೃಷಿಹೊಂಡ ಆಶ್ರಿತ ನೀರಾವರಿ ಮೂಲಕ ಬೇಸಾಯದ ಕೈಗೊಂಡು ಶ್ರಮ ಅಧಿಕವಾದರು, ಅದರಂತೆ ಫಲವನ್ನು ಅಧಿಕವಾಗಿ ಸಂಪಾದನೆ ಮಾಡುತ್ತಾ ದೇಶಪಾಂಡೆ ಫೌಂಡೇಶನ್ ಸಹಾಯಕ್ಕೆ ಧನ್ಯವಾದ ಸಲ್ಲಿಸುತ್ತಿದ್ದಾರೆ.

ಒಟ್ಟಾರೆ ಒಣ ಬೇಸಾಯದ ನಡುವೆ ಸಿಲುಕಿ, ಹಾವು ಏಣಿ ಆಟದಂತಾದ ರೈತರು ಕೃಷಿ ಬದುಕಿಗೆ ಕೃಷಿಹೊಂಡ ಜೀವಧಾರೆಯಾಗಿ ಭೂತಾಯಿಯ ಮಡಿಲನ್ನು ಹಸಿರು ಮಾಡಿ ರೈತನ ಆದಾಯದ ಕನಸನ್ನು ನನಸಾಗಿಸಿದೆ.

Edited By : Manjunath H D
Kshetra Samachara

Kshetra Samachara

14/11/2021 04:33 pm

Cinque Terre

37.92 K

Cinque Terre

0

ಸಂಬಂಧಿತ ಸುದ್ದಿ