ನರಗುಂದ : ಕೃಷಿಹೊಂಡ ಹೇಗೆ ನಿರ್ಮಿಸಿಕೊಂಡ್ರಿ ? ಆದರಿಂದ ನಿಮ್ಮ ಆದಾಯ ದುಪ್ಪಟ್ಟಾಯ್ತಂತೆ ನಿಜವಾ ? ಹೀಗೆ ಒಬ್ಬರ ಬಾಯಿಂದ ಇನ್ನೋಬ್ಬರ ಬಾಯಿಗೆ ಮಾಹಿತಿ ತಲುಪಿ ನರಗುಂದ ತಾಲೂಕಿನ ಹದಲಿ ಗ್ರಾಮದಲ್ಲಿ ತಮ್ಮ ಹೊಲದಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡ ರೈತಾಪಿ ಜನರಿಗೇನು ಕಡಿಮೆಯಿಲ್ಲಾ ಬಿಡಿ.
ಆ ಸಾಲಲ್ಲಿ ಅನುಭವಿ ರೈತ ಧರ್ಮಪ್ಪ ಲಕ್ಷ್ಮಪ್ಪ ಅಬ್ಬಿಗೇರಿ ಸಹ ಒಬ್ಬರು ತಮ್ಮ ಹತ್ತು ಎಕರೆ ಹೊಲದ ಬೆಳೆಗಳಿಗಾಗಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಾಗ ನೂರು ನೂರು ಸುತ್ತಳತೆ ಕೃಷಿಹೊಂಡ ನಿರ್ಮಿಸಿಕೊಂಡು ಇತರ ರೈತರಿಗೂ ಕೃಷಿಹೊಂಡ ನಿರ್ಮಿಸಿಕೊಳ್ಳುವಂತೆ ಸಲಹೆ ನೀಡಿ ಈ ಬಾರಿ ಕೃಷಿಹೊಂಡ ಆಧಾರಿತವಾಗಿಯೆ ಬೆಳೆ ಬೆಳೆದು ಬರೋಬ್ಬರಿ 5 ಲಕ್ಷ ನಿವ್ವಳ ಆದಾಯದಕ್ಕೆ ಮಣೆ ಹಾಕಿದ್ದಾರೆ.
ತಮ್ಮ ಹತ್ತು ಏಕರೆ ಜಮೀನಿನಲ್ಲಿ ಹತ್ತಿ, ಹೆಸರು, ಗೋವಿನಜೋಳ, ಈರುಳ್ಳಿ, ಸೇರಿ ಕೊತಂಬರಿ, ಮೆತ್ತೆ ಸೊಪ್ಪು ಬೆಳೆದಿದ್ದು ಅದರಲ್ಲೂ ವಿಶೇಷವಾಗಿ ವಾಣಿಜ್ಯ ಬೆಳೆ ಹತ್ತಿ ದೃಷ್ಟಿ ತೆಗೆಯುವಂತಹ ನೋಟ ಬೀರಿದೆ.
ಕೃಷಿಹೊಂಡ ಇಲ್ಲದ ದಿನಗಳಲ್ಲಿ ಇಳುವರಿ ತೆಗೆಯಲು ಹರಸಾಹಸ ಮಾಡುತ್ತಿದ್ದ, ರೈತರಿಗೀಗ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ಯೋಜನೆ ಬಡವನ ಮನೆಗೆ ಸ್ವತಃ ಭಾಗೀರಥಿ ಧಾವಿಸಿದಂತಹ ಆನಂದ ತಂದಿದ್ದು ಹಸಿರು ಬೆಳೆ ಉಲ್ಲಾಸ ತಂದಿದೆ.
ನೀವೂ ಸಹ ನಿಮ್ಮೂರಲ್ಲಿ ಕೃಷಿಹೊಂಡ ಆಶ್ರಿತ ಕೃಷಿ ಮಾಡಲು ಮತ್ತು ಅನುಭವಿ ರೈತ ಧರ್ಮಪ್ಪ ಲಕ್ಷ್ಮಪ್ಪ ಅಬ್ಬಿಗೇರಿ ಕೃಷಿ ಬದುಕಿನ ಗೆಲುವಿನ ಮಾತು ಕೇಳಲು ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ 7899736094.
Kshetra Samachara
20/09/2021 05:44 pm