ಹುಬ್ಬಳ್ಳಿ: ಕಟ್ಟಿಗೆ ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ, ಹುಬ್ಬಳ್ಳಿ ಹೊರ ಹೊಲಯದ ಕುಂದಗೋಳ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಆಂದ್ರಪ್ರದೇಶ ಪಾಸಿಂಗ್ ಇರುವ ಲಾರಿ ನಿನ್ನೆ ರಾತ್ರಿ ಬೆಂಗಳೂರಿನಿಂದ ದಾಂಡೇಲಿಗೆ ಹೋಗುತ್ತಿದ್ದ ವೇಳೆಯಲ್ಲಿ, ಕುಂದಗೋಳ ಕ್ರಾಸ್ ಬಳಿ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿದ್ದು, ಪರಿಣಾಮ ಲಾರಿ ಮೊಗಚಿ ಬಿದಿದ್ದೆ. ಇನ್ನು ಅಪಘಾತದಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
30/09/2022 12:21 pm