ಧಾರವಾಡ: ಬೈಕ್ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ದಂಪತಿಯನ್ನು ತಮ್ಮದೇ ಸರ್ಕಾರಿ ವಾಹನದಲ್ಲಿ ಕರೆತಂದು ಧಾರವಾಡ ಜಿಲ್ಲಾ ಆಸ್ಪತ್ರೆಗೆ ಗಾಯಾಳುಗಳನ್ನು ಚಿಕಿತ್ಸೆಗೆ ದಾಖಲಿಸುವ ಮೂಲಕ ಧಾರವಾಡ ತಹಶೀಲ್ದಾರ ಡಾ.ಸಂತೋಷ ಬಿರಾದಾರ ಮಾನವೀಯತೆ ಮೆರೆದಿದ್ದಾರೆ.
ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದ ಬಳಿ ಸವದತ್ತಿ ಪಟ್ಟಣದ ಮಂಜುನಾಥ ಹಾಗೂ ಅವರ ಪತ್ನಿ ಧಾರವಾಡದಿಂದ ಸವದತ್ತಿಗೆ ಹೋಗುವಾಗ ಹೊಲದಲ್ಲಿ ಬಿದ್ದಿದ್ದ ಗೊಬ್ಬರದ ಚೀಲ ಗಾಳಿಗೆ ಹಾರಿ ಬಂದು ಬೈಕ್ ಚಕ್ರಕ್ಕೆ ಸಿಲುಕಿದೆ. ಇದರಿಂದ ನಿಯಂತ್ರಣ ತಪ್ಪಿದ ಬೈಕ್ ನಡು ರಸ್ತೆಯಲ್ಲೇ ಬಿದ್ದಿದ್ದರಿಂದ ಇಬ್ಬರೂ ದಂಪತಿ ಗಾಯಗೊಂಡು ಒದ್ದಾಡುತ್ತಿದ್ದರು.
ಹಿಂದೆಯೇ ಬರುತ್ತಿದ್ದ ತಹಶೀಲ್ದಾರ ಸಂತೋಷ್ ಬಿರಾದರ ಅವರು, ಕೂಡಲೇ ಆ ಗಾಯಾಳುಗಳನ್ನು ತಮ್ಮ ಸರ್ಕಾರಿ ವಾಹನದಲ್ಲಿ ಕರೆದುಕೊಂಡು ಬಂದು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
Kshetra Samachara
16/06/2022 07:33 pm