ಕುಂದಗೋಳ : ಹಳ್ಳಿಗಳಲ್ಲಿ ಉದ್ಯೋಗದ ಬರ ಕಂಡು ಬೆನ್ನ ಹಿಂದೆ ರೊಟ್ಟಿ ಗಂಟು ಕಟ್ಟಿಕೊಂಡು ಪಟ್ಟಣಕ್ಕೆ ದುಡಿಯಲು ಬಂದವರು ಕೆಲಸ ಸಿಗದೇ ಮನೆಯತ್ತ ಮರಳುವ ದೃಶ್ಯಗಳು ನೋಡುಗರ ಮನ ಕಲುಕಿವೆ.
ಗುಡಗೇರಿ, ಗೌಡಗೇರಿ ಭಾಗದಲ್ಲಿ ಅತಿವೃಷ್ಟಿ ಹೆಚ್ಚಾಗಿ ಭೂಮಿಯಲ್ಲಿ ಕೆಲಸ ಇಲ್ಲದೆ ಬೆಳ್ಳಂ ಬೆಳಗ್ಗೆ ರೈಲು ಏರಿ ಕುಂದಗೋಳ ಪಟ್ಟಣಕ್ಕೆ ಕೆಲಸ ಹುಡುಕಿಕೊಂಡು ಬಂದ ಕೃಷಿ ಕೂಲಿ ಕಾರ್ಮಿಕರು ಕೆಲಸ ಇಲ್ಲದೆ ಸಪ್ಪೆ ಮೋರೆ ಹಾಕಿಕೊಂಡು ತಾಲೂಕು ಪಂಚಾಯಿತಿ ಕಟ್ಟಡದ ಮುಂದೆ ಕೂತು ಪುನಃ ಊರಿನತ್ತ ಹೆಜ್ಜೆ ಹಾಕುತ್ತಿದ್ದಾರೆ.
ಬಹುತೇಕ ಮುಂಗಾರು ರೈತಾಪಿ ಕೃಷಿ ಚಟುವಟಿಕೆಗಳು ಮುಕ್ತಾಯಕ್ಕೆ ಬಂದ ಹಿನ್ನೆಲೆಯಲ್ಲಿ, ಕೃಷಿ ಕೂಲಿ ಕಾರ್ಮಿಕರಿಗೆ ಈಗಾಗಲೇ ಉದ್ಯೋಗದ ಬರ ಕಾಡುತ್ತಲಿವೆ, ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾದ ಈ ದೃಶ್ಯಗಳನ್ನು ಒಮ್ಮೆ ನೋಡಿ..
ಕುಂದಗೋಳ ತಾಲೂಕಿನ 35 ಕಿ.ಮೀ ದೂರದ ಊರಿನಿಂದ ಬೆಳಿಗ್ಗೆ 8 ಗಂಟೆಗೆ ರೈಲು ಏರಿ ಬಂದವರು ಇದೀಗ ದುಡಿಯುವ ಕೈಗಳಿಗೆ ಕೆಲಸ ಇಲ್ಲದೇ ಖಾಲಿ ಕೂತು ಊರಿನತ್ತ ಮರಳುತ್ತಿರುವುದು ನಿಜಕ್ಕೂ ನಾಗರೀಕ ಸಮಾಜ ಆತಂಕ ಪಡುವ ಸನ್ನಿವೇಶ ಕಂಡಂತೆ ಭಾಸವಾಯಿತು.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/10/2024 05:29 pm