ಧಾರವಾಡ: ಇತ್ತೀಚೆಗೆ ಧಾರವಾಡ ಸಿವಿಲ್ ಕೋರ್ಟ್‌ನಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ವೇಳೆ ಅಸಲು ದಾವೆ ಕೇಸೊಂದಕ್ಕೆ ಸಂಬಂಧಿಸಿದಂತೆ 89 ವರ್ಷ ವಯಸ್ಸಿನ ಕಕ್ಷಿದಾರ ಮಹಿಳೆ ಕೋರ್ಟ್ ಒಳಗಡೆ ಬರಲಾರದ ಅಸಹಾಯಕ ಸ್ಥಿತಿಯಲ್ಲಿರುವುದನ್ನು ಪರಿಗಣಿಸಿ ನ್ಯಾಯಾಧೀಶರಾದ ಗಿರೀಶ ಆರ್.ಬಿ. ಅವರು ಆ ಮಹಿಳೆ ಇರುವಲ್ಲಿಯೇ ಬಂದು ಆಕೆಯ ಹೇಳಿಕೆಗಳನ್ನು ಪಡೆದು ರಾಜೀ ಸಂಧಾನ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.
ನ್ಯಾಯಾಧೀಶರ ಈ ಮಾನವೀಯ ಕಳಕಳಿಗೆ ವಕೀಲರು ಮತ್ತು ಅಲ್ಲಿದ್ದವರೆಲ್ಲ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಕರಣದ ವಾದಿ ಪರವಾಗಿ ವಕೀಲರಾದ ಎಸ್.ಎಚ್. ಬಳಗನ್ನವರ ಹಾಗೂ ಪ್ರತಿವಾದಿ ಪರ ವಕೀಲರಾದ ಶಕ್ತಿ ಹಿರೇಮಠ ವಕಾಲತ್ತು ವಹಿಸಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/12/2024 12:09 pm