ಕಲಘಟಗಿ:ಪಟ್ಟಣದಲ್ಲಿ ಪೊಲೀಸ್ ಇಲಾಖೆಯಿಂದ ರಾಷ್ಟ್ರೀಯ ಏಕತಾ ದಿನಾಚರಣೆಯನ್ನು ಶನಿವಾರ ಸಂಜೆ ಹಮ್ಮಿಕೊಳ್ಳಲಾಗಿತ್ತು.
ಸಿಪಿಐ ವಿಜಯ ಬಿರಾದಾರ ನೇತ್ರತ್ವದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆಯ ಅಂಗವಾಗಿ "ರನ್ ಫಾರ್ ಯೂನಿಟಿ''
ಶೀರ್ಷಿಕೆ ಅಡಿ ಆರಂಭಗೊಂಡ ರಸ್ತೆ ಓಟದಲ್ಲಿ ಪೊಲೀಸ್ ಸಿಬ್ಬಂದಿ ಉತ್ಸಾಹದಿಂದ ಪಾಲ್ಗೊಂಡರು.
ಪಟ್ಟಣದ ಬಮ್ಮಿಗಟ್ಟಿ ಕ್ರಾಸ್ ನಲ್ಲಿ ಕಾರ್ಯಕ್ರಮಕ್ಕೆ ವಲಯ ಅರಣ್ಯಾಧಿಕಾರಿ ಶ್ರೀಕಾಂತ್ ಪಾಟೀಲ ಹಾಗೂ ರಮೇಶ ಸೋಲಾರಗೊಪ್ಪ ಚಾಲನೆ ನೀಡಿದರು.ಪೊಲೀಸ್ ಸಿಬ್ಬಂದಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ "ರನ್ ಫಾರ್ ಯೂನಿಟಿ'' ಮೂಲಕ ಜಾಗೃತಿ ಮೂಡಿಸಿದರು.
Kshetra Samachara
31/10/2020 09:34 pm