ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ನಿರುಪಯುಕ್ತ ಬಾಟಲ್ ಗಳಿಂದ! ವಿಜ್ಞಾನ ಮಾದರಿಗಳ ತಯಾರಿ

ಹುಬ್ಬಳ್ಳಿ- ‌ನಿರುಪಯುಕ್ತ ಪ್ಲಾಸ್ಟಿಕ್ ಬಾಟಲ್ ಗಳಿಂದ, ಮನೆಯ ಅಂದ ಹೆಚ್ಚಿಸೋ ವಸ್ತುಗಳನ್ನು ಮಾಡೋದು ನೀವು ನೋಡಿರುತ್ತಿರೀ. ಆದರೆ, ಅದೇ ಬಾಟಲ್ ಗಳಿಂದ ವಿಜ್ಞಾನದ ಪ್ರಯೋಗಗಳನ್ನು ರಚಿಸಿ, ವಿಜ್ಞಾನದ ವಿದ್ಯಾರ್ಥಿಗಳಿಗೆ ವ್ಯಕ್ತಿಯೋರ್ಯ ಮಾದರಿಯಾಗಿದ್ದಾರೆ. ಹಾಗಾದ್ರೆ ಆ ವ್ಯಕ್ತಿ ಯಾರು? ಆತ ಮಾಡಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ...

ಹೀಗೆ ಪ್ಲಾಸ್ಟಿಕ್ ಬಾಟಲ್ ಗಳಿಂದ ಹಲವಾರು ವಿಜ್ಞಾನ ಮಾದರಿಗಳನ್ನು ತಯಾರಿಸುತ್ತ, ಕುಳಿತಿರುವ ವ್ಯಕ್ತಿಯ ಹೆಸರು ಶಿವಾನಂದ ಛಲವಾದಿ. ನಗರದ ಉನಕಲ್ ನಿವಾಸಿ, ಅಗಸ್ತ್ಯ ಫೌಂಡೇಶನದ ವಲಯ ಮುಖ್ಯಸ್ಥರಾದ ಶಿವಾನಂದ, ಮೊದಲಿನಿಂದಲೂ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದು, ವಿಜ್ಞಾನ ಕ್ಷೇತ್ರದಲ್ಲಿ ಏನಾದರೂ ಸಾಧಿಸಿಬೇಕೆಂಬ ಛಲ ಇವರನ್ನು ಕಾಡಿತ್ತು.

ಹೀಗಾಗಿ ಇವರು ಸುಮಾರು 200 ಕ್ಕೂ ಹೆಚ್ಚು ಬಾಟಲ್ ಗಳನ್ನು ಸಂಗ್ರಹಿಸಿ, ಅವುಗಳಿಂದ ವಿಜ್ಞಾನ ಪ್ರಯೋಗಗಳು ಹಾಗೂ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಿದ್ದಾರೆ.

ಎಸ್,,, ಈ ಪ್ಲಾಸ್ಟಿಕ್ ಬಾಟಲ್ ಗಳಿಂದ ಜಲಚಕ್ರ, ದೃಷ್ಟಿಯ ಆಳ, ಬೆಳಕು ಸರಳರೇಖೆಯಲ್ಲಿ ಚಲಿಸುವುದು, ಗಾಳಿಗೆ ಸರ್ವತೋಮುಖ ಒತ್ತಡ, ನ್ಯೂಟನ್ ಕಾರು, ದೃಷ್ಟಿ ಛಲ, ಗುರುತ್ವ ಕೇಂದ್ರ , ಶಬ್ದದ ಮಾದರಿ, ಫಾಸ್ಕಲ್ ನಿಯಮ, ಬರ್ನೋಲಿಯ ತತ್ವ, ಎಂಜಿನ್ ಮಾದರಿ, ಸ್ಥಾಯಿ ವಿದ್ಯುತ್ ಹೀಗೆ ಸುಮಾರು 40 ಕ್ಕೂ ಹೆಚ್ಚು ಬಾಟಲ್ ಮೂಲಕ, ವಿಜ್ಞಾನ ಮಟ್ಟದಲ್ಲಿ ಹಲವಾರು ಪ್ರಯೋಗ ಮಾಡುವ ಮೂಲಕ ಯಶ್ವಿಸಿ ಕಂಡುಕೊಂಡಿದ್ದಾರೆ......

ಮಕ್ಕಳ್ಳಿಗೆ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಜ್ಞಾನ ಹೊಂದಬೇಕು ಎಂಬ ಉದ್ದೇಶದಿಂದ, ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ಅವುಗಳಿಂದ ವಿಜ್ಞಾನ ಪ್ರಯೋಗಗಳನ್ನು ತಯಾರಿಸಿದ್ದಾರೆ.

ತಮ್ಮ ದೈನಂದಿನ ಕಾರ್ಯಕ್ರಮದ ಜೊತೆ ಇಂತಹ ಹವ್ಯಾಸ ರೂಢಿಸಿಕೊಂಡಿರುವುದು ಶ್ಲಾಘನೀಯವಾಗಿದ್ದು, ಶಿವಾನಂದ ಅವರು ಹೀಗೆ ವಿಜ್ಞಾನಮಟ್ಟದಲ್ಲಿ ಇನ್ನೂ ಉತ್ತುಂಗ ಮಟ್ಟಕ್ಕೆ ಏರಲಿ, ಇನ್ನೂ ಹತ್ತು ಹಲವಾರು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲ್ಲಿ ಎಂಬುವುದೇ ಪಬ್ಲಿಕ್ ನೆಕ್ಸ್ಟ್ ಆಶಯವಾಗಿದೆ.....!

Edited By : Manjunath H D
Kshetra Samachara

Kshetra Samachara

27/10/2020 06:26 pm

Cinque Terre

36.49 K

Cinque Terre

4

ಸಂಬಂಧಿತ ಸುದ್ದಿ