ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಬ್ಬಕ್ಕೆ ಉತ್ತಮ ಉಡುಗೊರೆ ಕೊಟ್ಟ ಕಾನ್ಸ್ ಟೇಬಲ್

ಹುಬ್ಬಳ್ಳಿ- ಟ್ರಾಫಿಕ್ ಪೊಲೀಸರು ಅಂದ್ರೆ ಸಾಕು ಎಲ್ಲರೂ ಯಪ್ಪಾ ಇವರ ಉಸಾಬರಿನೇ ಬೇಡ ಅಂತಾರೆ.

ನಮ್ಮ ಡಾಕ್ಯೂಮೆಂಟ್ಸ್ ಸರಿ ಇದ್ರು ಪೈನ್ ಹಾಕತ್ತಾರೆ ಅಂತಾ ಅವರನ್ನು ಬೈದುಕೊಳ್ಳುವವರೇ ಹೆಚ್ಚು.

ಆದ್ರೆ ಇಲ್ಲೊಬ್ಬ ಟ್ರಾಫಿಕ್ ಪೊಲೀಸ್ ಕಾನ್ಸ್ ಟೇಬಲ್ ಒಬ್ಬರು ಮಾಡಿದ ಕೆಲಸವನ್ನು ಕೇಳಿದ್ರೆ ನೀವು ಕೂಡಾ ಖುಷಿ ಪಡ್ತೀರಾ. ಹೌದು ಕೊರೊನಾ ದಿಂದ ಕಂಗಾಲಾಗಿ ಜೀವನ ನಡೆಸಲು ಪ್ರತಿಯೊಬ್ಬರು ಹೆಣಗಾಡುತ್ತಿದ್ದಾರೆ. ಇದರ ಮಧ್ಯೆ ಸಾಲು ಸಾಲು ಹಬ್ಬಗಳು ಹಬ್ಬದ ಸಡಗರ ಸಂಭ್ರಮಿಸಲು ಹಣ ಬೇಕು ಹಾಗಾಗಿ ಧಾರವಾಡ ಜಿಲ್ಲೆ ತಡಸಿನಕೊಪ್ಪ ಗ್ರಾಮದ ತಾಯಿ ಮಗ ದಸರಾ ನಿಮಿತ್ತ ಮಾವಿನ ತಳಿಲು ಮಾರಲು ಹುಬ್ಬಳ್ಳಿಗೆ ಆಗಮಿಸಿದ್ದರು.

ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಈ ತಾಯಿ ಮಗ ಮಾವೀನ ತೋರನ ಮಾರುತ್ತಿರುವುದನ್ನು ಗಮನಿಸಿದ ಕರ್ತವ್ಯ ನಿರತ ಪೂರ್ವ ಸಂಚಾರಿ ಪೊಲೀಸ್ ಠಾಣೆ ಪೊಲೀಸ್ ಕಾನ್ಸ್ ಟೇಬಲ್ ಶಂಭು ರೆಡ್ಡಿ ಅವರನ್ನು ವಿಚಾರಿಸಿದ್ದಾರೆ. ಆ ವೇಳೆ 9 ನೇ ತರಗತಿಯಲ್ಲಿ ಓದುತ್ತಿದ್ದ ಆ ಹುಡುಗ ಅಮ್ಮನಿಗೆ ಸಹಾಯ ಮಾಡಲು ಬಂದಿರುವುದಾಗಿ ತಿಳಿಸಿದ್ದಾನೆ. ಮನೆಯಲ್ಲಿ ಕಷ್ಟ ಸರ್ ಹಾಗಾಗಿ ನಾನು ಕೂಡಾ ಮಾರಲು ಬಂದಿದ್ದೇನೆ ಎನ್ನುತ್ತಲೇ ಮಮ್ಮಲ ಮರುಗಿದ ಕಾನ್ಸ್ ಟೇಬಲ್ ಶಂಭು ರೆಡ್ಡಿ ಆ ಹುಡಗನನ್ನು, ಅಲ್ಲೆ ಇದ್ದ ಪುಸ್ತಕದ ಅಂಗಡಿಗಳಿಗೆ ಕರೆದುಕೊಂಡು ಹೋಗಿ, ಆತನಿಗೆ ಪುಸ್ತಕಗಳನ್ನು ಕೊಡಿಸಿ ಚೆನ್ನಾಗಿ ಓದುವಂತೆ ಹೇಳಿದ್ದಾರೆ.

ಜೊತೆಗೆ ಅವರ ತಾಯಿಗೂ ಕೂಡಾ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋಗಬೇಡಿ, ಬದಲಿಗೆ ಅವರಿಗೆ ವಿದ್ಯಾಭ್ಯಾಸ ಕೊಡಿಸಿ ಎಂದು ತಿಳುವಳಿಕೆ ಹೇಳಿ ಕಳುಹಿಸಿದ್ದಾರೆ. ಒಟ್ಟಿನಲ್ಲಿ ಈ ಪೊಲೀಸರ ಕಾರ್ಯಕ್ಕೆ ಎಲ್ಲಿಲ್ಲದ ಪ್ರಶಂಸೆ ವ್ಯಕ್ತವಾಗುತ್ತಿದೆ.

Edited By : Nagesh Gaonkar
Kshetra Samachara

Kshetra Samachara

27/10/2020 11:51 am

Cinque Terre

59.84 K

Cinque Terre

45

ಸಂಬಂಧಿತ ಸುದ್ದಿ