ಧಾರವಾಡ : ಈ ಶನಿವಾರ ಬಂತದ್ರ ಸಾಕು ನಮ್ಮ ನುಗ್ಗಿಕೇರಿ ಹನುಮಪ್ಪನಿಗೆ ಭಕ್ತರು ವಿಧ ವಿಧದ ಹರಕಿ ಹೊತ್ತು ಅಭಿಷೇಕ ಚೀಟಿ ಮಾಡಿಸಿ ಬಿಡ್ತಾರ ನೋಡ್ರಿ. ಅದರಾಗ ಈ ಐಪಿಎಲ್ ಸುದ್ದಿ ಚಾಲೂ ಆಗೇತಿ ಆಗೇತಿ ಕರ್ನಾಟಕದ ಅಭಿಮಾನಿ ದೇವ್ರುಗಳು ಈ ಆರ್ಸಿಬಿ ಗೆಲ್ಲಲಿ ಅಂತ್ಹೇಳಿ ಅಭಿಷೇಕ ಮಾಡಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.
ಆದ್ರೆ ಈ ಶನಿವಾರ ಇಲ್ಲೊಬ್ಬ ಭಕ್ತ ತುಸು ಡಿಫರೆಂಟ್ ಎಂಬಂತೆ ಇಡೀ ಲೋಕಕ್ಕೆ ಬೇಕಾದ ದೊಡ್ಡ ಬೇಡಿಕೆಯನ್ನೇ ಹನುಮಂತನಿಗೆ ಕಾಗದದ ಚೀಟಿಯಲ್ಲಿ ಬರೆದು ಕಾಣಿಕೆ ಹುಂಡಿಗೆ ಸಮರ್ಪಿಸಿದ್ದಾನೆ.
ಹೌದು ! ನುಗ್ಗಿಕೇರಿ ಹಣಮಂತನಿಗೆ ಬರೆದ ಬೇಡಿಕೆಯ ಕಾಗದದಲ್ಲಿ ಮುಂಬರುವ ಹೊಸ ವರ್ಷದಲ್ಲಿ ಯಾವ ಮಹಿಳೆಯ ಮೇಲೂ ಲೈಂಗಿಕ ದೌರ್ಜನ್ಯ ನಡೆಯದಿರಲಿ, ಯಾರ ಮೇಲೂ ಆಸಿಡ್ ದಾಳಿ ನಡೆಯದಿರಲಿ, ಕೊರೊನಾ ಮಹಾಮಾರಿ ಜಗತ್ತನ್ನು ಬಿಟ್ಟು ಓಡಲಿ, ಯಾವ ಮಕ್ಕಳೂ ಬಡತನ ಹಸಿವಿನಿಂದ ಬಳಲದಿರಲಿ ಎಂಬ ಕೋರಿಕೆ ಸಲ್ಲಿಸಿ ಇಡೀ ಲೋಕದ ಒಳಿತನ್ನ ಬೇಡಿದ್ದಾನೆ.
Kshetra Samachara
25/10/2020 09:03 am