ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನವಜಾತ ಶಿಶುವಿಗೆ ಪುನರ್ ಜನ್ಮ ನೀಡಿದ ನಾರಾಯಣ ಹೃದಯಾಲಯ

ಧಾರವಾಡ: ಗಂಭೀರ ಹೃದಯರೋಗ ಸಮಸ್ಯೆಯಿಂದ ಬಳಲುತ್ತಿದ್ದ 20 ದಿನದ ನವಜಾತ ಶಿಶುವಿಗೆ ಧಾರವಾಡದ ಎಸ್ ಡಿಎಂ ನಾರಾಯಣ ಹೃದಯಾಲಯವು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ಮಗುವಿಗೆ ಪುನರ್ ಜನ್ಮ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಕ್ಕಳ ಹೃದಯರೋಗ ತಜ್ಞ ಡಾ.ಅರುಣ ಬಬಲೇಶ್ವರ, ನವಜಾತ ಶಿಶುವಿಗೆ ಸಂಕೀರ್ಣ ಹೃದ್ರೋಗ ಹಸ್ತಕ್ಷೇಪ ಎನಿಸಿದ ಎಡ ಶೀರ್ಷಧಮನಿ ಅಪಧಮನಿ ಕತ್ತರಿಸುವಿಕೆ ಮತ್ತು ಬಲೂನ್ ಮೂಲಕ ಹಿಗ್ಗಿಸುವಿಕೆ ಮಾಡಿ ಆ ಭಾಗವನ್ನು ಒಂದುಗೂಡಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದರು.

ಹುಬ್ಬಳ್ಳಿ ಮೂಲದ 20 ದಿನದ ಮಗು ಕೇವಲ 2.3 ಕೆ.ಜಿ. ತೂಕವಿತ್ತು. ಮಗುವಿಗೆ ಹೃದಯದಲ್ಲಿ ರಕ್ತ ಪರಿಚಲನೆಯ ಸಮಸ್ಯೆಯ ಕಾರಣದಿಂದ ಧಾರವಾಡದ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್‌ಗೆ ಕರೆತರಲಾಯಿತು. ಈ ಮಗುವಿನ ಆರೋಗ್ಯ ತಪಾಸಣೆ ನಡೆಸಿದಾಗ, ಮಗುವಿಗೆ ಹೃದಯದ ಮಹಾಪಧಮನಿಯಲ್ಲಿ ದೊಡ್ಡ ಪ್ರಮಾಣದ ದೋಷ ಇದ್ದ ಕಾರಣ ರಕ್ತ ಪರಿಚಲನೆಯ ಸಮಸ್ಯೆ ಇರುವುದು ದೃಢಪಟ್ಟಿತ್ತು ಎಂದರು.

ಇನ್ನು ತನ್ನ ಮಗುವಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದಕ್ಕಾಗಿ ವೈದ್ಯರಿಗೆ ಮಗುವಿನ ತಂದೆ ಶಕೀಲ್ ಅಹಮ್ಮದ್ ಧನ್ಯವಾದ ಅರ್ಪಿಸಿದರು.

ಇನ್ನು ಈ ಶಸ್ತ್ರ ಚಿಕಿತ್ಸೆಯನ್ನು ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆಯುಷ್ಮಾನ್ ಭಾರತ ಯೋಜನೆಯಡಿ ಉಚಿತವಾಗಿ ನಡೆಸಿದ್ದು ವಿಶೇಷವಾಗಿದೆ.

ನಾರಾಯಣ ಹಾರ್ಟ್ ಸೆಂಟರ್‌ನ ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಡಾ.ರವಿವರ್ಮ ಪಾಟೀಲ್ ಅವರು ಕೂಡ ಈ ಶಸ್ತ್ರ ಚಿಕಿತ್ಸೆಯ ಮುಂದಾಳತ್ವ ವಹಿಸಿದ್ದರು.

Edited By : Nagesh Gaonkar
Kshetra Samachara

Kshetra Samachara

22/10/2020 05:05 pm

Cinque Terre

17.69 K

Cinque Terre

8

ಸಂಬಂಧಿತ ಸುದ್ದಿ