ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನನ್ನ ನಾಯಿ ಮರಿ ಹುಡುಕಿಕೊಡಿ ಪ್ಲೀಸ್: ಜೊತೆಗಾರನಿಗಾಗಿ ಬಾಲಕನ ಮನವಿ

ಹುಬ್ಬಳ್ಳಿ: ನಾಯಿ ಅಂದ್ರೇ ಯಾರಿಗೆ ತಾನೇ ಪ್ರೀತಿ ಇಲ್ಲ ಹೇಳಿ...ಮನೆಯಲ್ಲಿ ಸಾಕು ನಾಯಿ ಅಂದ್ರೆ ಚಿಕ್ಕಮಕ್ಕಳಿಗೆ ಅಚ್ಚುಮೆಚ್ಚು. ಮನೆಯಲ್ಲಿರುವ ಮಕ್ಕಳು ನಾಯಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವುದು ಸಹಜ.ಮನೆಯಲ್ಲಿರುವ ನಾಯಿ ಕಾಣದಿದ್ದಾಗ ಬಾಲಕನೊಬ್ಬ ನಾಯಿ ಹುಡುಕಿಕೊಡುವಂತೆ ವಿನೂತನವಾಗಿ ಮನವಿ ಮಾಡಿದ್ದಾನೆ.

ಧಾರವಾಡ ಜಿಲ್ಲೆ ಅಣ್ಣಿಗೇರಿ ಪಟ್ಟಣದ ಶಾರದಾ ಕಾಲೋನಿಯ ಬಾಲಕನೊಬ್ಬ ತನ್ನೊಂದಿಗೆ ಆಟವಾಡಿ ನಲಿಯುತ್ತಿದ್ದ ನಾಯಿ ಮರಿ ಏಕಾಏಕಿ ಕಾಣೆಯಾಗಿದ್ದು,ನಾಯಿ ಮರಿ ಹುಡುಕಿಕೊಡುವಂತೆ ಸಾಮಾಜಿಕ ಜಾಲತಾಣದ ಮೊರೆಹೋಗಿದ್ದು,ನಾಯಿಮರಿಗಾಗಿ ಧ್ವನಿ ಸಂದೇಶವನ್ನು ರವಾನಿಸಿದ್ದಾನೆ.

ನನ್ನ ನಾಯಿ ಮರಿ ಹುಡುಕಿಕೊಡಿ ಪ್ಲೀಸ್ ಎಂದು ಮನವಿ ಮಾಡಿಕೊಂಡಿರುವ ಬಾಲಕನ ಮನದಾಳದ ಮಾತು ನಿಜಕ್ಕೂ ಮೂಕ ನಾಯಿಯೊಂದಿಗಿನ ಬಾಂಧವ್ಯ ಎಲ್ಲರನ್ನೂ ಚಕಿತಗೊಳಿಸಿದ್ದಂತೂ ಸತ್ಯ...ಯಾರಿಗಾದರೂ ನಾಯಿ ಸಿಕ್ಕಿದ್ದರೇ ಹುಡುಕಿ ಕೊಡಿ ಪ್ಲೀಸ್....

Edited By :
Kshetra Samachara

Kshetra Samachara

15/10/2020 06:49 pm

Cinque Terre

10.61 K

Cinque Terre

2

ಸಂಬಂಧಿತ ಸುದ್ದಿ