ಅಣ್ಣಿಗೇರಿ : ಬಡ ಕುಟುಂಬಕ್ಕೆ ಆರ್ಥಿಕ ಸಹಾಯವಾಗಲಿ ಎಂದು ಸರ್ಕಾರ ವಯೋವೃದ್ಧರಿಗೆ, ಅಂಗವಿಕಲರಿಗೆ, ವಿಧವೆಯರಿಗೆ ಪ್ರತಿ ತಿಂಗಳು ಮಾಸಾಶನವನ್ನು ನೀಡುತ್ತಿದೆ.
ಆದರೆ ಪಟ್ಟಣದ ಹಾಗೂ ತಾಲೂಕಿನ ಕೆಲ ಗ್ರಾಮಗಳ ಅರ್ಹ ಫಲಾನುಭವಿಗಳಿಗೆ ಒಂದು ವರ್ಷ ಕಳೆದರೂ ಈ ಮಾಸಾಶನ ಬಂದಿಲ್ಲ.
ಈ ಕುರಿತು ಸ್ಥಳೀಯ ತಹಶೀಲ್ದಾರ್ ಕಚೇರಿಯಲ್ಲಿ ವಿಚಾರಿಸಿದರೆ ಸರಿಯಾದ ಉತ್ತರ ನೀಡುತ್ತಿಲ್ಲ ಎಂದು ಮಂಜುನಾಥ ಮಡಿವಾಳರ ಹಾಗೂ ಖೈರುನಬಿ ಹೆಬಸೂರ ಅಧಿಕಾರಿಗಳ ವಿರುದ್ಧ ಆರೋಪಿಸಿದರು.
ನಾನು ವಯೋವೃದ್ಧೆ ನನಗೆ ಕೂಲಿ ಕೆಲಸ ಮಾಡಲು ಬರುವುದಿಲ್ಲ ಸರ್ಕಾರದಿಂದ ಬರುತ್ತಿದ್ದ ಮಾಸಾಶನವನ್ನೇ ಉಪಯೋಗಿಸಿಕೊಂಡು ನನ್ನ ಜೀವನವನ್ನು ಸಾಗಿಸುತ್ತಿದ್ದೇನೆ.
ಕಳೆದ ಒಂದು ವರ್ಷದಿಂದ ನನ್ನ ಮಾಸಾಶನವನ್ನು ಸ್ಥಗಿತಗೊಳಿಸಿದ್ದರಿಂದ ನನ್ನ ಬದುಕು ಬಲು ಕಷ್ಟವಾಗಿದೆ ಎಂದು ಹುಸೇನಬಿ ಹೆಬಸೂರ ಹೇಳಿದರು.
ಒಂದು ಸಾರಿ ತಹಶೀಲ್ದಾರ್ ಕಚೇರಿಗೆ ಬಂದು ಹೋಗಲು 80 ರೂ ಆಟೋ ಬಾಡಿಗೆ ಕೊಡಬೇಕು. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ನಮ್ಮನ್ನುಅಲೆದಾಡಿಸುತ್ತಿರುವುದು ಖೇದಕರ ಸಂಗತಿ ಎಂದು ನೊಂದ ಮಹಿಳೆ ರತ್ನವ್ವ ಮಡಿವಾಳರ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.
Kshetra Samachara
13/10/2020 05:41 pm