ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೃಷಿ ಮೇಳದಲ್ಲಿ ರೈತರ ಮಾನಸಿಕ ಆರೋಗ್ಯಕ್ಕೆ ಒತ್ತು ಕೊಟ್ಟ ಡಿಮಾನ್ಸ್

ಧಾರವಾಡ: ಪ್ರಸಕ್ತ ವರ್ಷದ ಕೃಷಿ ಮೇಳ ಯಂತ್ರೋಪಕರಣ, ರಸಗೊಬ್ಬರ, ಬೀಜ, ಜಾನುವಾರು ಪ್ರದರ್ಶನಕ್ಕಷ್ಟೇ ಸೀಮಿತವಾಗಿರಲಿಲ್ಲ. ಈ ಕೃಷಿ ಮೇಳದಲ್ಲಿ ಧಾರವಾಡದ ಡಿಮಾನ್ಸ್ ಆಸ್ಪತ್ರೆ ರೈತರ ಮಾನಸಿಕ ಆರೋಗ್ಯ ಬಗ್ಗೆಯೂ ಕಾಳಜಿ ವಹಿಸಿ ಗಮನಸೆಳೆದಿದೆ.

ಕೃಷಿ ಮೇಳದ ಮುಖ್ಯ ವೇದಿಕೆ ಬಳಿಯೇ ಡಿಮಾನ್ಸ್ ಆಸ್ಪತ್ರೆ ಸ್ಟಾಲ್ ಒಂದನ್ನು ಇಟ್ಟುಕೊಂಡು ರೈತರ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮಾನಸಿಕ ರೋಗದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿದೆ. ಡಿಮಾನ್ಸ್‌ನ ಈ ಪ್ರಯೋಗಕ್ಕೆ ಯಶಸ್ಸು ಸಿಕ್ಕಿದೆ. ನೂರಾರು ರೈತರು, ಮಹಿಳೆಯರು ಆಗಮಿಸಿ ಸಲಹೆ-ಸೂಚನೆ ಪಡೆದುಕೊಂಡಿದ್ದಾರೆ.

ಮೇಳಕ್ಕೆ ಆಗಮಿಸಿದ ಬಹುತೇಕ ರೈತರು ಹಾಗೂ ಸಾರ್ವಜನಿಕರು ಮಾನಸಿಕ ಕಾಯಿಲೆಗಳ ಬಗ್ಗೆ ತಮ್ಮಲ್ಲಿದ್ದ ಸಂದೇಹಗಳನ್ನು ನಿವಾರಿಸಿಕೊಂಡಿದ್ದಾರೆ. ಅದರಲ್ಲಿ ಕೆಲವು ರೈತರು ಸಾಲಬಾಧೆ, ಬೆಳೆ ನಾಶ ಹಾಗೂ ಬೆಳೆಗೆ ಸೂಕ್ತ ಬೆಲೆ ಸಿಗದೇ, ಆರ್ಥಿಕ ಸಮಸ್ಯೆಯಿಂದ ಬಳಲಿ ಮಾನಸಿಕ ಆರೋಗ್ಯ ಹಾಳುಮಾಡಿಕೊಂಡ ಬಗ್ಗೆ, ಮತ್ತೆ ಕೆಲವರು ಮದ್ಯಪಾನದಿಂದ ಜೀವನದಲ್ಲಿ ಜಿಗುಪ್ಸೆಗೊಂಡವರು, ಅದರಲ್ಲಿ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋದವರನ್ನು ಗುರುತಿಸಿ ಆಪ್ತ ಸಮಾಲೋಚನೆ ನಡೆಸಿದ, ಡಿಮಾನ್ಸ್ ವೈದ್ಯರು ಹಾಗೂ ಸಮಾಲೋಚಕರು ಅವರಲ್ಲಿ ಮತ್ತೇ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಿದ್ದಾರೆ.

ಕೃಷಿ ಮೇಳ ಆರಂಭವಾದ ಎರಡು ದಿನದಲ್ಲಿ 500ಕ್ಕೂ ಹೆಚ್ಚು ರೈತರನ್ನು ಸಮಾಲೋಚನೆಗೆ ಒಳಪಡಿಸುವ ಮೂಲಕ ಅವರ ಮಾನಸಿಕ ಕಾಯಿಲೆಗೆ ಪರಿಹಾರ ಕಲ್ಪಿಸುವಲ್ಲಿ ಡಿಮಾನ್ಸ್ ಸಿಬ್ಬಂದಿ ಶ್ರಮಿಸಿದ್ದಾರೆ. ಜೊತೆಗೆ ಮಾನಸಿಕ ಕಾಯಿಲೆ ಬರದಂತೆ ಹೇಗೆ ಎಚ್ಚರಿಕೆ ವಹಿಸಬೇಕು ಎಂಬುದನ್ನು ಸಲಹೆ ನೀಡುವ ಉತ್ತಮ ಕೆಲಸವನ್ನು ಧಾರವಾಡ ಡಿಮ್ಹಾನ್ಸ್ ಸಹಯೋಗದಲ್ಲಿ ಮೈಸೂರಿನ ಸರಕಾರಿ ನರ್ಸಿಂಗ್ ಕಾಲೇಜಿನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಾದ ರಾಮ ಚೌಹಾಣ್, ಶರತ್, ಸುಧಾ, ಸೋನಾ, ಸೌಮ್ಯಾ ಸೇರಿದಂತೆ 7 ಜನರ ತಂಡ ಮಾಡುತ್ತಿದೆ. ಇವರ ಈ ಕಾರ್ಯಕ್ಕೆ ನಾವೂ ಒಂದು ಸಲಾಂ ಹೇಳಲೇಬೇಕಲ್ಲವೇ?

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

Edited By : Shivu K
Kshetra Samachara

Kshetra Samachara

20/09/2022 10:43 am

Cinque Terre

30.01 K

Cinque Terre

1

ಸಂಬಂಧಿತ ಸುದ್ದಿ