ಹುಬ್ಬಳ್ಳಿ: ನಮ್ಮ ಹೃದಯ.. ಇದಕ್ಕೆ ಅದರದ್ದೇ ಆದ ಮಹತ್ವ ಇದೆ. ಇದನ್ನ ನಾವು ಜತನದಿಂದ ನೋಡಿಕೊಳ್ಳಬೇಕು. ತಂಬಾಕು ಸೇವನೆ, ಸಿಗರೇಟ್ ಸೇವನೆ ನಮ್ಮ ಹೃದಯಕ್ಕೆ ಮಾರಕವೇ ಸರಿ. ಈ ಹೃದಯಕ್ಕೆ ಆಘಾತ ಆಗೋದು ಇದೆ. ಅದಕ್ಕೆ ಈ ದುಶ್ಚಟಗಳು ಕಾರಣ ಆಗಿರುತ್ತವೆ. ಆದರೆ ಚಟಗಳೇ ಇಲ್ಲದ ವ್ಯಕ್ತಿಗಳಿಗೂ ಹೃದಯಾಘಾತ ಆಗಬಹುದು.
ಹೌದು. ಹೃದಯ ಸಂಬಂಧಿ ಕಾಯಿಲೆಗಳಲ್ಲಿ ಹೃದಯಾಘಾತ ಪ್ರಮುಖವಾಗಿಯೇ ಇದೆ. ಹೆಚ್ಚಿನ ಕೊಬ್ಬಿನಂಶ ಇರೋರು, ಬಿಪಿ, ಶುರಗರ್ ಇರೋರಿಗೂ ಹೃದಯಾಘಾತ ಆಗೋ ಸಾಧ್ಯತೆ ಇದೆ. ಇಂತಹ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡೋ ಕೆಲಸವನ್ನ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್ ಮಾಡ್ತಾನೇ ಇದೆ.
ಕಳೆದ 15 ವರ್ಷಗಳ ಹಿಂದೆ ಹೃದಯ ಸಂಬಂಧಿ ತೊಂದರೆಗಳಿಗೆ ಮುಂಬೈ ಇಲ್ಲವೇ ಬೆಂಗಳೂರಿಗೆ ಹೋಗಲು ಇಲ್ಲಿಯ ವೈದ್ಯರು ಹೇಳುತ್ತಿದ್ದರು. ಆದರೆ ಈಗ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್‌ನಲ್ಲಿಯೇ ಎಲ್ಲ ಚಿಕಿತ್ಸೆ ದೊರೆಯುತ್ತದೆ. ಬೈಪಾಸ್ ಸರ್ಜರಿ, ಸ್ಟೆಂಟ್ ಅಳವಡಿಸೋದು ಸೇರಿದಂತೆ ಕ್ಲಿಷ್ಟಕರ ಸಮಸ್ಯೆಗೆ ಇಲ್ಲಿಯೇ ಚಿಕಿತ್ಸೆ ದೊರೆಯುತ್ತದೆ.
ನಾರಾಯಣ ಹಾರ್ಟ್ ಕೇರ್ ಸೆಂಟರ್‌ಗೆ ಬರೋ ಜನರಿಗೆ ಇಲ್ಲಿ ಸೂಕ್ತ ಇನ್ಶೂರೆನ್ಸ್ ವ್ಯವಸ್ಥೆ ಕೂಡ ಇದೆ. ಸರ್ಕಾರಿ ಸೌಲಭ್ಯಗಳಾದ ಬಿಪಿಎಲ್ ಕಾರ್ಡ್, ಖಾಸಗಿ ಇನ್ಶೂರೆನ್ಸ್‌ಗಳು ಕೂಡ ಇಲ್ಲಿ ಅಪ್ಲೈ ಆಗುತ್ತವೆ. ಕಡಿಮೆ ಖರ್ಚಿನಲ್ಲಿಯೇ ಒಳ್ಳೆ ಚಿಕಿತ್ಸೆ ನೀಡೋ ನಾರಾಯಣ ಹಾರ್ಟ್ ಸೆಂಟರ್‌ನ ವ್ಯವಸ್ಥೆಯನ್ನ ಸದುಪಯೋಗ ಪಡಿಸಿಕೊಳ್ಳಿ ಎಂದು ಡಾ.ಮಹೇಶ್ ಹೊನ್ನಳ್ಳಿ, ಎಂಡಿ (ಇಂಟರ್‌ನಲ್ ಮೆಡಿಸನ್),ಡಿಎನ್‌ಬಿ ಕಾರ್ಡಿಯಾಲಜಿ ಹೃದಯ ರೋಗ ತಜ್ಞರು ಮನವಿ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/08/2022 05:55 pm