ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಣ್ಣಿಗೆ ಬಿದ್ದ ಸುಣ್ಣ : ಮಗುವನ್ನು ಕಾಪಾಡಿದ ಎಂಎಂ ಜೋಶಿ ಆಸ್ಪತ್ರೆಯ ವೈದ್ಯರು

ಹುಬ್ಬಳ್ಳಿ: ಎಲೆ ಅಡಿಕೆಗೆ ಬಳಸುವ ಸುಣ್ಣ ಕಣ್ಣಿಗೆ ತಗುಲಿ ತೀವ್ರ ನೋವಿನಿಂದ ಬಳಲುತ್ತಿದ್ದ, ಕೇವಲ 11 ತಿಂಗಳ ಮಗುವಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಹುಬ್ಬಳ್ಳಿಯ ಎಂ ಎಂ ಜೋಶಿ ನೇತ್ರ ಚಿಕಿತ್ಸಾ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

ಹೌದು ಕಳೆದ ಶನಿವಾರ ಗದಗ ಜಿಲ್ಲೆಯ ಗ್ರಾಮವೊಂದರ ನಿವಾಸಿ ಬಸವರಾಜ ಎಂಬುವವರ 11 ತಿಂಗಳ ಮಗು, ತನ್ನ ಅಜ್ಜಿಯೊಂದಿಗೆ ಆಟವಾಡುವಾಗ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಮಿಶ್ರಿತ ಸುಣ್ಣದ ಚೀಟಿನಿಂದ ಮಗುವಿನ ಕಣ್ಣಿಗೆ ಸುಣ್ಣ ತಗುಲಿದೆ.

ಈ ವೇಳೆ ತೀವ್ರ ನೋವಿನಿಂದ ಬಳಲುತ್ತಿದ್ದ ಮಗುವನ್ನ ಹುಬ್ಬಳ್ಳಿಯ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿದೆ. ಈ ವೇಳೆ ಮಗುವಿನ ಕಣ್ಣಿನ ಗುಡ್ಡೆಗೆ ಉಂಟಾಗಿರುವ ತೀವ್ರ ಗಾಯವನ್ನ, ವಿಶೇಷ ಚಿಕಿತ್ಸೆ ನೀಡುವ ಮೂಲಕ ಆಸ್ಪತ್ರೆಯ ವೈದ್ಯರು ಗುಣಪಡಿಸಿದ್ದಾರೆ.

ಇನ್ನು ದೇಶದಲ್ಲಿ ಪ್ರತಿ ವರ್ಷ 80 ರಿಂದ 90 ಪ್ರಕರಣಗಳು ಇಂತಹ ನೇತ್ರ ಸಮಸ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ಇದು ಈ ಆಸ್ಪತ್ರೆಯಲ್ಲಿಯೇ 10ನೇ ಪ್ರಕರಣವಾಗಿದ್ದು, ಈ ಕುರಿತು ಜನಸಾಮಾನ್ಯರಲ್ಲಿ ತಿಳಿವಳಿಕೆ ಮೂಡಿಸುವ ಅಗತ್ಯವಿದೆ. ಅಲ್ದೆ ಪ್ಲಾಸ್ಟಿಕ್ ಹಾಗೂ ಪ್ಲಾಸ್ಟಿಕ್ ಟ್ಯೂಬ್ ನಲ್ಲಿ ಬಳಸಲಾಗುವ ಸುಣ್ಣದ ಬಳಕೆ ಬಗ್ಗೆ, ಸರ್ಕಾರ ಸೂಕ್ತ ಕ್ರಮಕೈಗೊಳ್ಳುವ ಮೂಲಕ ಇಂತಹ ವಸ್ತುಗಳನ್ನ ನಿಷೇಧ ಮಾಡಬೇಕು ಇಲ್ಲವೇ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಇಂತಹ ಪ್ರಕರಣಗಳ ಬಗ್ಗೆ ಸೂಕ್ತ ಗಮನ ಹರಿಸಬೇಕು ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ಆಗ್ರಹಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

26/08/2022 08:46 pm

Cinque Terre

76.94 K

Cinque Terre

5

ಸಂಬಂಧಿತ ಸುದ್ದಿ