ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜನತೆಗೆ ಎಸ್.ಡಿ.ಎಂ. ನಾರಾಯಣ ಹಾರ್ಟ್ ಕೇರ್ ಸೆಂಟರ್ ಅತ್ಯುತ್ತಮ ಸೇವೆ ಒದಗಿಸುತ್ತಲೇ ಬಂದಿದೆ.
ಕಳೆದ 12 ವರ್ಷದಿಂದ ಉತ್ತಮ ಸೇವೆ, ಅತ್ಯುತ್ತಮ ಚಿಕಿತ್ಸೆ ನೀಡ್ತಾ ಬಂದಿರೋ ನಾರಾಯಣ ಹೃದಯಾಲಯ ಈಗ 13ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಯಶಸ್ವಿ ಪಯಣದಲ್ಲಿ ಹಲವು ಗುರಿಗಳನ್ನು ಸಾಧಿಸಿದೆ. ಹೃದಯ ಕಸಿ ಮಾಡೋದೇ ಈ ಸೆಂಟರ್‌ನ ಮುಂದಿನ ಗುರಿಯೂ ಆಗಿದೆ.
ಎಸ್.ಡಿ.ಎಂ. ನಾರಾಯಣ ಹಾರ್ಟ್ ಕೇರ್ ಸೆಂಟರ್ ನಲ್ಲಿ ಈಗಾಗಲೇ ಬಡ ಹೃದಯ ರೋಗಿಗಳ ನೆರವಿಗಾಗಿಯೇ ಹೆಚ್ಚು ಕಡಿಮೆ 2 ಸಾವಿರ ಮೆಡಿಕಲ್ ಕ್ಯಾಂಪ್‌ಗಳನ್ನು ಮಾಡಲಾಗಿದೆ. ಹೊರ ರೋಗಿಗಳ ವಿಭಾಗದಿಂದಲೂ 2 ಲಕ್ಷ ರೋಗಿಗಳಿಗೆ ಚಿಕಿತ್ಸೆ ಕೂಡ ಇಲ್ಲಿಯೇ ಕೊಡಲಾಗಿದೆ.
ಕಡಿಮೆ ವೆಚ್ಚ, ಅತ್ಯುತ್ತಮ ಚಿಕಿತ್ಸೆಯ ಗುರಿ ಹೊಂದಿರೋ ನಾರಾಯಣ ಹಾರ್ಟ್ ಕೇರ್ ಸೆಂಟರ್ ನಲ್ಲಿ, ಇಲ್ಲಿವರೆಗೂ 5 ಸಾವಿರ ಜನರಿಗೆ ಹೃದಯ ಶಸ್ತ್ರ ಚಿಕಿತ್ಸೆಮಾಡಲಾಗಿದೆ. ಇತ್ತೀಚೆಗೆ ಮಕ್ಕಳ ಮತ್ತು ನವಜಾತ ಶಿಶುಗಳ ಹೃದಯ ಸಂಬಂಧಿ ಕಾಯಿಲೆಗಳಿಗೂ ಚಿಕಿತ್ಸೆ ಆರಂಭಿಸಲಾಗಿದೆ.
ಕಳೆದ 10 ವರ್ಷದಿಂದ ಎಸ್.ಡಿ.ಎಂ. ನಾರಾಯಣ ಹಾರ್ಟ್ ಕೇರ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿರೋ ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ್ ಪಟ್ಟಣಶೆಟ್ಟಿ ಈ ಎಲ್ಲ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿರೋ ಉತ್ತಮ ಚಿಕಿತ್ಸೆ ಮತ್ತು ನುರಿತ ವೈದ್ಯರ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕೇಳಿಕೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/08/2022 08:03 pm