ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಈ ಪುಟ್ಟ ಕಂದನ ನೋಡಿ.. ಆರ್ಥಿಕ ಸಹಾಯ ಮಾಡಿ

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ಆ ಪುಟ್ಟ ಕಂದ ಭೂಮಿಗೆ ಬಂದು ಈಗ ಒಂದೂವರೆ ವರ್ಷವಾಗಿದೆಯಷ್ಟೆ. ಇನ್ನೂ ಬದುಕಿ ಬಾಳಬೇಕಾದ ಈ ಕಂದಮ್ಮ ಇದೀಗ ಸಾವು ಬದುಕಿನ ಮಧ್ಯೆ ನಿತ್ಯ ಹೋರಾಟ ಮಾಡುತ್ತಿದೆ. ಈ ಫೋಟೋದಲ್ಲಿ ಕಾಣುತ್ತಿರುವ ಕಂದನ ಹೆಸರು ಇರ್ಫಾನ್ ದರವಾನ್. ಧಾರವಾಡ ಹೊಸಯಲ್ಲಾಪುರದಲ್ಲಿರುವ ಈ ಮಗುವಿಗೆ ವಯಸ್ಸು ಈಗಷ್ಟೆ ಒಂದೂವರೆ ವರ್ಷ. ಫೋಟೋದಲ್ಲಿ ಇಷ್ಟು ಮುದ್ದಾಗಿರುವ ಈ ಕಂದಮ್ಮನ ಸದ್ಯದ ಪರಿಸ್ಥಿತಿ ನೋಡಿದ್ರೆ ಕಣ್ಣಲ್ಲಿ ನೀರು ಬರದೇ ಇರಲಾರದು.

ಈ ಪುಟ್ಟ ಕಂದಮ್ಮ ಎಲ್ಲ ಮಕ್ಕಳಂತೆ ಆಡಿ ನಲಿಯಬೇಕಾಗಿತ್ತು. ಆದರೆ, ಇರ್ಫಾನ್‌ ಹೃದಯದಲ್ಲಿ ರಂಧ್ರಗಳು ಇದ್ದಿದ್ದರಿಂದ ಚಿಕ್ಕ ವಯಸ್ಸಿನಲ್ಲೇ ಹೃದಯದ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಯಿತು. ಬೆಂಗಳೂರಿನಲ್ಲಿ ಮಗುವಿಗೆ ಶಸ್ತ್ರ ಚಿಕಿತ್ಸೆಯನ್ನೂ ಮಾಡಿಸಲಾಯಿತು. ಆದರೆ, ಈ ಕಂದಮ್ಮನ ಹಣೆಬರಹವೇ ಸರಿ ಇರಲಿಲ್ಲ. ಶಸ್ತ್ರಚಿಕಿತ್ಸೆ ಯಶಸ್ವಿ ಆಗಲೇ ಇಲ್ಲ. ಇದರಿಂದ ಮತ್ತೆ ಇರ್ಫಾನ್ ಜೀವ ಉಳಿಸಿಕೊಳ್ಳಲು ಹೋರಾಡಬೇಕಾಯಿತು. ಪ್ರಪಂಚದ ಅರಿವೇ ಇಲ್ಲದ, ಹುಟ್ಟು ಸಾವಿನ ಅರ್ಥವೇ ಗೊತ್ತಿಲ್ಲದ ಒಂದೂವರೆ ವರ್ಷದ ಕಂದ ಇದೀಗ ಎಲ್ಲ ಪ್ರಜ್ಞೆಯನ್ನೂ ಕಳೆದುಕೊಂಡು ಬದುಕುತ್ತಿದೆ. ಈ ಕಂದ ಒದ್ದಾಡುವ ಪರಿಸ್ಥಿತಿ ನೋಡಿದರೆ ಕಣ್ಣಂಚು ತಾನಾಗೇ ಒದ್ದೆಯಾಗುತ್ತವೆ. ಈ ಕಂದನ ಶಸ್ತ್ರ ಚಿಕಿತ್ಸೆಗೆಂದು ಈತನ ತಂದೆ ಅಸ್ಲಾಂ 3 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ತನ್ನ ಬದುಕಿಗೆ ಆಸರೆಯಾಗಿದ್ದ ಆಟೊ ಮಾರಿ, ಸಾಲ ಮಾಡಿಕೊಂಡು ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಶಸ್ತ್ರಚಿಕಿತ್ಸೆ ವಿಫಲವಾಗಿದ್ದರಿಂದ ಪ್ರತಿತಿಂಗಳು ಮಗುವಿಗೆ ಚಿಕಿತ್ಸೆ ಕೊಡಿಸಲೇಬೇಕಾದ ಅನಿವಾರ್ಯತೆ ಈ ಕುಟುಂಬಕ್ಕಿದೆ. ಅದಕ್ಕಾಗಿ ಪ್ರತಿತಿಂಗಳು 30-40 ಸಾವಿರ ಖರ್ಚು ಮಾಡಬೇಕಿದೆ. ಆದರೆ, ಕಡು ಬಡತನದಲ್ಲಿರುವ ಈ ಕುಟುಂಬ ಇಷ್ಟು ಹಣ ಹೊಂದಿಸಲಾಗದೇ ಮಗುವಿನ ವೇದನೆಯನ್ನೂ ನೋಡಲಾಗದೇ ಒದ್ದಾಡುತ್ತಿದೆ.

ಈ ಕುಟುಂಬಕ್ಕೆ ಸದ್ಯ ಹಣಕಾಸಿನ ಅವಶ್ಯಕತೆ ಇದ್ದು, ಸಹಾಯ ಮಾಡಬೇಕೆನ್ನುವ ದಾನಿಗಳು ಇರ್ಫಾನ್ ಅವರ ತಾಯಿ ಸನಾ ದರವಾನ್ ಅವರ ಕೆವಿಜಿ ಬ್ಯಾಂಕ್ ಖಾತೆ ನಂಬರ್ 89125309812-IFSC Code-KVGB0004411ಈ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಬಹುದು ಇಲ್ಲವೇ ಇರ್ಫಾನ್ ಅವರ ತಂದೆ ಅಸ್ಲಾಂ ಅವರ ಫೋನ್ ಪೇ, ಗೂಗಲ್ ಪೇ ನಂಬರ್-9019636745 ಇದಕ್ಕೂ ಹಣ ವರ್ಗಾವಣೆ ಮಾಡಬಹುದು. ದಾನಿಗಳು ಕಳುಹಿಸುವ ಹಣ ಒಂದು ಪುಟ್ಟ ಕಂದಮ್ಮನ ಜೀವನಕ್ಕೆ ನೆರವಾದಂತಾಗುತ್ತದೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ

ನಿಮ್ಮ ಚಿಕ್ಕ ಉಡುಗೊರೆ ನಮಗೆ ಇನ್ನೂ ಉತ್ತಮ ಜನಹಿತ ಸುದ್ದಿಗಳನ್ನು ನೀಡಲು ಪ್ರೋತ್ಸಾಹಿಸುತ್ತದೆ!

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/08/2022 05:05 pm

Cinque Terre

61.56 K

Cinque Terre

10

ಸಂಬಂಧಿತ ಸುದ್ದಿ