ಅಳ್ನಾವರ:ಹಾವು ಕಡಿತದಿಂದ ನರಳಾಡುತ್ತಿದ್ದ ಮಹಿಳೆಯನ್ನ ಧಾರವಾಡದ ಜಿಲ್ಲಾ ಆಸ್ಪತ್ರೆಗೆ ರವಾನಿಸಲು ಅಂಬ್ಯುಲೆನ್ಸ್ ಇಲ್ಲದೆ ಸುಮಾರು ಒಂದೂವರೆ ಗಂಟೆಗಳ ಕಾಲ ಬೆಡ್ ಮೇಲೆ ನರಳಾಡುವ ದೃಶ್ಯ ಅಳ್ನಾವರದ ಸರ್ಕಾರಿ ಆಸ್ಪತ್ರೆಯಲ್ಲಿ ಕಂಡು ಬಂದಿದೆ.
ಹವ್ದು ವೀಕ್ಷಕರೇ ತಾಲೂಕಿನ ಆಂಬೊಳ್ಳಿ ಗ್ರಾಮದ ನಿವಾಸಿ ಸುಮಿತ್ರಾ ಎಂಬುವವರಿಗೆ ಮುಂಜಾನೆ ಹಾವು ಕಚ್ಚಿದೆ.ಹಾವು ಕಡಿದ ತಕ್ಷಣ ಮನೆಯವರು ದ್ವಿಚಕ್ರ ವಾಹನದ ಮೇಲೆ ಅಳ್ನಾವರ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ.ಈ ಆಸ್ಪತ್ರೆಯಲ್ಲಿ ಹಾವು ಕಡಿತ ಚಿಕಿತ್ಸೆ ಇಲ್ಲದ ಕಾರಣ ಧಾರವಾಡದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.
ಆದರೆ ಅಳ್ನಾವರ ದಿಂದ ಧಾರವಾಡದ ಜಿಲ್ಲಾ ಆಸ್ಪತ್ರೆಗೆ ಹೋಗಲು ಅಂಬ್ಯುಲೆನ್ಸ್ ಇಲ್ಲದೆ ಸುಮಾರು ಒಂದೂವರೆ ಗಂಟೆಗಳ ಕಾಲ ಮಹಿಳೆ ಯು ಹಾವು ಕಡಿತಡ ನೋವಿನಿಂದ ಆಸ್ಪತ್ರೆಯ ಬೆಡ್ ಮೇಲೆಯೇ ನರಳಾಡುವ ದೃಶ್ಯ ಅತ್ಯಂತ ಭೀಕರ ವಾಗಿತ್ತು.ಇನ್ನೊಂದು ಅಂಬ್ಯುಲೆನ್ಸ್ ಇದ್ರೂ ಅದಕ್ಕೆ ಪೆಟ್ರೋಲ್ ಇಲ್ಲ ಅಂತ ಸಿಬ್ಬಂದಿ ನಿಷ್ಕಾಳಜಿ ತೋರಿದ್ದಾರೆ ಎಂದು ಆಸ್ಪತ್ರೆಯ ವ್ಯವಸ್ಥೆ ಬಗ್ಗೆ ಪೇಶೆಂಟ್ ಕಡೆಯವರು ಬೇಸರ ವ್ಯಕ್ತ ಪಡಿಸಿದ್ದಾರೆ.
ಈ ಹಿಂದೆ ಕಾಷೆನಟ್ಟಿ ಗ್ರಾಮದ ಮಹಿಳೆ ಯೊಬ್ಬರಿಗೆ ಹಾವು ಕಚ್ಚಿದ ಪರಿಣಾಮವಾಗಿ ಅಳ್ನಾವರ ಆಸ್ಪತ್ರೆ ಸಿಬ್ಬಂದಿಯ ತಾತ್ಸಾರದಿಂದ ಹಾಗೂ ಅಂಬ್ಯುಲೆನ್ಸ್ ಇಲ್ಲದೆ ಆ ಮಹಿಳೆಯೂ ಸಾವನ್ನಪ್ಪಿದ್ದರು.ಇದರ ಪರಿಣಾಮವಾಗಿ ಅಂಬ್ಯುಲೆನ್ಸ್ ಚಾಲಕನನ್ನು ಅಮಾನತ್ತು ಮಾಡಲಾಗಿತ್ತು.
Kshetra Samachara
23/06/2022 08:39 am