ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಅಣ್ಣಿಗೇರಿ: ಆರೋಗ್ಯದ ಹಿತದೃಷ್ಟಿಯಿಂದ ಯೋಗವನ್ನು ಅಭ್ಯಾಸ ಮಾಡಬೇಕು. ಉತ್ತಮ ಆರೋಗ್ಯಕ್ಕೆ ಯೋಗವು ಸಹಕಾರಿಯಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ,ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆಚಾರ್ ಹಾಲಪ್ಪ ಹೇಳಿದರು.

ಜಿಲ್ಲಾ ಆಯುಷ್ ಇಲಾಖೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಧಾರವಾಡ ವಲಯದ ಸಹಯೋಗದೊಂದಿಗೆ ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಆಯೋಜಿಸಿದ್ದ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವಸಂಸ್ಥೆಯ 193 ರಾಷ್ಟ್ರಗಳಲ್ಲಿ 177 ರಾಷ್ಟ್ರಗಳು ವಿಶ್ವ ಯೋಗ ದಿನವನ್ನು ಆಚರಿಸುತ್ತಿವೆ.ಭಾರತವು ಇಡೀ ವಿಶ್ವಕ್ಕೆ ಕೊಟ್ಟ ಯೋಗವನ್ನು ಮುನ್ನೆಡೆಸಿಕೊಂಡು ಹೋಗಬೇಕಾಗಿದೆ ಎಂದು ತಿಳಿಸಿದರು.

ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಮಾತನಾಡಿ ಜಿಲ್ಲಾ ಮಟ್ಟದ ಯೋಗ ದಿನವನ್ನು ಶ್ರೀ ಅಮೃತೇಶ್ವರ ಸನ್ನಿಧಿಯಲ್ಲಿ ಆಚರಿಸಲಾಗುತ್ತಿದೆ.ಈ ಯೋಗ ದಿನವನ್ನು ವಿಶ್ವದೆಲ್ಲೆಡೆ ಆಚರಣೆ ಮಾಡಲಾಗುತ್ತಿದೆ ಎಂದು ಮಾತನಾಡಿದರು.

ದಾಸೋಹ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ,ಮನಸ್ಸು ಶುದ್ಧವಾಗಲು ಯೋಗ ಅಗತ್ಯ.ಜಗತ್ತಿನಲ್ಲಿ ಮನಸ್ಸು ಅತಿ ವೇಗವಾಗಿ ಚಲಿಸುತ್ತದೆ. ವೇಗವಾಗಿ ಸಾಗುವ ಮನಸ್ಸನ್ನು ನಿಯಂತ್ರಣದಲ್ಲಿಡಲು ಯೋಗದಿಂದ ಸಾಧ್ಯ. ಎಂದು ಮಾತನಾಡಿದರು.

ಡಾ. ಎ. ಸಿ.ವಾಲಿ ಮಹಾರಾಜರು ಮಾತನಾಡಿ ಶರೀರವನ್ನು ಸದೃಢವಾಗಿಸಲು ಯೋಗ ಮಾಡಬೇಕು. ಯೋಗದಿಂದ ಆಧ್ಯಾತ್ಮಿಕ ಶಕ್ತಿ ಹೆಚ್ಚಲಿದೆ ಎಂದು ಹೇಳಿದರು.

ಅಂತರಾಷ್ಟ್ರೀಯ ಯೋಗ ತಜ್ಞ, ಆಕಾಶವಾಣಿ ಸಂಗೀತ ಸಂಯೋಜಕ ಜಗದೀಶ್ ಮಳಿಗಿ, ಯೋಗ ಶಿಕ್ಷಕ ಡಾ.ಶ್ರೀಧರ ಹೊಸಮನಿ ಅವರು ವಿವಿಧ ಆಸನಗಳನ್ನು ಹೇಳಿಕೊಟ್ಟರು.

ಈ ವೇಳೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ, ಉಪವಿಭಾಗಾಧಿಕಾರಿ ಅಶೋಕ ತೇಲಿ, ತಹಶೀಲ್ದಾರ ಮಂಜುನಾಥ ಅಮಾಸಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಮೀನಾಕ್ಷಿ ಅವಲೂರ ಶಾಂತಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಮಾಯಾಚಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳು, ಭಾಗವಹಿಸಿದ್ದರು.

ನಂದೀಶ್ ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ

Edited By : Manjunath H D
Kshetra Samachara

Kshetra Samachara

21/06/2022 05:07 pm

Cinque Terre

14.88 K

Cinque Terre

0

ಸಂಬಂಧಿತ ಸುದ್ದಿ