ಪಬ್ಲಿಕ್ ನೆಕ್ಸ್ಟ್ ವಿಶೇಷ:
ಶ್ರೀಧರ ಪೂಜಾರ, ಕುಂದಗೋಳ
ಕುಂದಗೋಳ: ಯೋಗ ಕಲಿಯುವ ಆಸಕ್ತರಿಗೆ ಇಲ್ಲೊಬ್ಬ ರಾಜ್ಯಮಟ್ಟದ ಯೋಗ ಪಟು ಸೂಕ್ತ ಯೋಗಾಸನದ ಜೊತೆ ಯೋಗದ ಪ್ರತಿ ಮಜಲುಗಳನ್ನು ಕಲಿಸಲು ಮುಂದೆ ಬಂದಿದ್ದಾರೆ.
ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಗ್ರಾಮೀಣ ಪ್ರತಿಭೆ ಮಲ್ಲಿಕಾರ್ಜುನ ಕೇರಿ ಎಂಬ ಈ ಯುವಕ ಬಾಲ್ಯದಿಂದಲೇ ಯೋಗದ ಕಡೆ ಗಮನ ಹರಿಸಿ ಪದವಿಪೂರ್ವ, ಪದವಿ ಶಿಕ್ಷಣಕ್ಕೆ ಕಾಲಿಟ್ಟಾಗ ಅದಕ್ಕೊಂದು ರೂಪ ಕೊಟ್ಟು ರಾಜ್ಯ ಮಟ್ಟದ ಯೋಗಪಟುವಾಗಿ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಇವರು ಹಗರಿಬೊಮ್ಮನಹಳ್ಳಿ ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ದ್ವಿತೀಯ, ಚಿತ್ರದುರ್ಗದ ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ತೃತೀಯ, ಹಾಗೂ ಧಾರಾವಾಡದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ 5ನೇ ಸ್ಥಾನ ಗಳಿಸಿ, ಬೆಂಗಳೂರಿನ ಯೋಗಾ ಚಾಂಪಿಯನಶಿಪ್ ಸ್ಪರ್ಧಿಯಾಗಿದ್ದಾರೆ.
ಪ್ರಸ್ತುತ ಪದವಿ ವ್ಯಾಸಂಗ ಮಾಡುತ್ತಿರುವ ಈ ಯುವಕ ನವಲೆ, ವಸ್ತ್ರಧವತಿ, ಹನುಮಾಸಾನ, ವೃಶ್ಚಿಕಾಸನದಂತಹ ವಿವಿಧ ಕಠಿಣವಾದ ಯೋಗದ ಪ್ರತಿ ಮಜಲನ್ನು ಸೋಜಿಗವೆಂಬಂತೆ ಮಾಡುವ ಕಲೆಗೆ ಪ್ರಾಚಾರ್ಯರೂ ಬೆಂಬಲಿಸಿದ್ದಾರೆ.
ತಾನೊಬ್ಬ ರಾಜ್ಯಮಟ್ಟದ ಯೋಗಪಟುವಾದರೂ ತಾನು ಪರರಿಗೆ ಯೋಗ ಕಲಿಸಿದಾಗಲೇ ಹೊಸದನ್ನು ಕಲಿಯಲು ಸಾಧ್ಯ ಎನ್ನುವ ಮಲ್ಲಿಕಾರ್ಜುನ ಕೇರಿ ಮಾತು ಅದೆಷ್ಟೋ ಜನ ಯೋಗಾಸಕ್ತಾರಿಗೆ ಸದಾವಕಾಶ ನೀಡಿದ್ದಂತೂ ಸುಳ್ಳಲ್ಲ.
Kshetra Samachara
21/06/2022 01:12 pm