ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಎಪ್ರಿಲ್ 7ಕ್ಕೆ ವಿಶೇಷ ಚೇತನ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರ

ಹುಬ್ಬಳ್ಳಿ: 75 ವರ್ಷಗಳ ಪ್ರಗತಿಪರ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಒಲಿಂಪಿಕ್ಸ್ ಭಾರತ ಜಾಗತಿಕ ಸಂಸ್ಥೆ ಆಯೋಜಿಸಿದ ವಿಶೇಷ ಚೇತನ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಇದೇ ಎಪ್ರಿಲ್ 7 ರಂದು ಹೊಸ ನಗರದ ಬಸ್ ನಿಲ್ದಾಣದ ಹಿಂದಗೆಡೆಯ ವಾಸವಿ ಮಹಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ಪೆಷಲ್ ಒಲಿಂಪಿಕ್ಸ್ ಭಾರತ ಕ್ರೀಡಾ ನಿರ್ದೇಶಕ ಭಾರತಿ ಕೊಠಾರಿ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ 75,000 ಕ್ರೀಡಾಪಟುಗಳನ್ನು 75 ನಗರದಲ್ಲಿ, 750 ಕೇಂದ್ರಗಳಲ್ಲಿ ಹಾಗೂ ನಮ್ಮ ರಾಜ್ಯದ 7,500 ವಿಶೇಷ ಕ್ರೀಡಾಪಟುಗಳಿಗೆ ಸ್ಪೇಷಲ್ ಒಲಿಂಪಿಕ್ಸ್ ಆರೋಗ್ಯ ಮಾರ್ಗಸೂಚಿಗಳ ಪ್ರಕಾರ ತರಬೇತಿ ಪಡೆದ ವೈದ್ಯಕೀಯ ವೃತ್ತಿಪರರು ಹಮ್ಮಿಕೊಳ್ಳಲಿದ್ದಾರೆ ಎಂದರು.

ಈ ಶಿಬಿರದಲ್ಲಿ ದಂತ ಪರೀಕ್ಷೆ, ಹಾಗೂ ಆರೋಗ್ಯ, ಪೋಷಣೆ, ಸಾಮಾನ್ಯ ಆರೋಗ್ಯದ ಅರಿವು ಮಾನದಂಡಗಳು ಇವು ಆರೋಗ್ಯವಂತ ಕ್ರೀಡಾಪಟುಗಳ ಸ್ಪೆಷಲ್ ಒಲಿಂಪಿಕ್ಸ್ ಕಾರ್ಯಕ್ರಮವಾಗಿದ್ದು ಕ್ರೀಡಾಪಟುಗಳಿಗೆ ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಒದಗಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು. ಇನ್ನೂ ವಿಶೇಷ ಮಕ್ಕಳಿಗೆ ಮತ್ತೆ ಕ್ರೀಡೆಗೆ ಬಾ ಎನ್ನುವ ಘೋಷಣೆಯೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

Edited By : Nagesh Gaonkar
Kshetra Samachara

Kshetra Samachara

05/04/2022 06:37 pm

Cinque Terre

17.73 K

Cinque Terre

1

ಸಂಬಂಧಿತ ಸುದ್ದಿ