ಹುಬ್ಬಳ್ಳಿ: ಹೆಸರಿಗೆ ಕೆಲಸ ಮಾಡುದ್ ಅಂದ್ರ ಇದ್ ನೋಡ್ರೀ. ಕೋವಿಡ್ ಐತಿ ಅಂತ ಗೊತ್ತಾದ ಮ್ಯಾಗ್ ದೊಡ್ಡ ಏನೋ ಕಡದ್ ಕಟ್ಟೆ ಹಾಕದಂಗ್ ಫೋನ್ ಮ್ಯಾಗ್ ಫೋನ್ ಮಾಡಿ, ಮನೆಗೆ ಬಂದ್ ಈ ಸ್ಟಿಕರ್ ಹಚ್ಚಿ ಮಂದಿನ್ ಮುಜುಗರ ಆಗುವಂಗ್ ಮಾಡುದ್ ಅಲ್ಲದೇ ಎಲ್ಲ zonal ನ್ಯಾಗ್ ಗುಳಗಿ ಹಂಚು ಕೆಲಸಾ ಮಾಡಾಕುಂತಾರ್.
ವ್ಹಾ...ವ್ಹಾ... ಎಂತಹ ಪುಣ್ಯದ ಕೆಲಸ ಪಾಪ್ ಮನೆವರೆಗೂ ಬಂದ್ ಗುಳುಗಿ ಕೊಟ್ಟ ನಮ್ಮ ಆರೋಗ್ಯದ ಬಗ್ಗೆ ಎಷ್ಟ್ ಕಾಜಿ ಮಾಡಾಕುಂತಾರ್ ಅಂತ್ ತಿಳಕೊಂಡಿದ್ರ್. ಅದು ಭ್ರಮೆ, ಕೇವಲ ಭ್ರಮೆ ಅಷ್ಟೇ....
ಹೌದ್ರೀ.. ಮ್ಯಾಗ್ ಸರ್ಕಾರ ಹೇಳಿದೆ ಅನ್ನುವ ಸಂಕಟಕ್ ಮನಿಮಟಾ ಬಂದ್ ಗುಳಿಗಿ ಕೊಟ್ಟ ಫೋಟೋ ಹೊಡಿಸಿಕೊಂಡ ಹೊಂಟ್ ಬಿಡುದ್. ಆ ಪಾಕಿಟನ್ಯಾಗ್ ಯಾವ ಯಾವ್ ಗುಳಿಗಿ ಅದಾವ್? ಅವ್ ಯಾವಾಗ ಯಾವಾಗ್ ತಗೋಬೇಕ್ ಅನ್ನುದ್ ಏನು ಇರುದಿಲ್ಲ. ಒಂದ್ ಡಾಟಾ ಕ್ರಿಯೆಟ್ ಮಾಡಾಕ್. ಈ ನಾಟಕ ಮಾಡಿ ಹೊಂಟ್ ಬಿಡುದ್ ಇದನ್ನ ನಾವ್ ಹೇಳಾಕತ್ತಿಲ್ಲ. ಇವರ್ ಕಡೆಯಿಂದ ಅಮೂಲ್ಯ ಸೇವೆ ಪಡೆದ್ ಮಂದಿನ್ ಹೆಲ್ಯಾರ್ ಕೇಳ್ರೀ..
ಅಲ್ಲಾ. ನಿಮಗ್ ಸರಿಯಾಗಿ ಯೋಜನೆ ಅನುಷ್ಟಾನ ಮಾಡಾಕಾಗುವುದಿಲ್ಲ ಅಂದ್ರ ಯಾಕ್ ಮಾಡಿ ಮಂದಿ ಕಷ್ಟಪಟ್ಟ ಕಟ್ಟಿರುವ Tax ರೊಕ್ಕಾನ್ ಹಾಳಮಾಡಿ... ಹತ್ತಿ ಬಿತ್ತಿರಿ...ಅಂತ್.
ಸಾರ್ವಜನಿಕರೆ ಈ ವ್ಯವಸ್ಥೆಯ ಬಗ್ಗೆ ದೂರುಗಳಿದಲ್ಲಿ ಕರೆ ಮಾಡಿ 7349619443
ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೊ ಪಬ್ಲಿಕ್ ನೆಕ್ಸ್ಟ್
Kshetra Samachara
07/02/2022 06:34 pm