ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ ಶ್ರೀಧರ ಪೂಜಾರ
ಕುಂದಗೋಳ : ನಮಸ್ಕಾರಿ ರೀ ಕುಂದಗೋಳ ಮಂದಿ..
ಕಳೆದ ತಿಂಗಳು ಇದೇ ನಿಮ್ಮ ಕುಂದಗೋಳ ತಾಲೂಕಿನ ಸರ್ಕಾರಿ ಆಸ್ಪತ್ರೆ ಒಳಗ್ ರೋಗಿ ಹಾಗೂ ರೋಗಿಯ ಸಂಬಂಧಿಕರಿಗೆ ಕುಡಿಯಲು ನೀರು ಮತ್ತು ಬೆಡ್ ಶೀಟ್ ನೀಡದ ತಾಲೂಕು ಆಸ್ಪತ್ರೆ ಅಧಿಕಾರಿಗಳ ಆಡಳಿತ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಬ್ಲಿಕ್ ನೆಕ್ಸ್ಟ್ ಮಾಧ್ಯಮದ ಮೂಲಕ ಅವ್ಯವಸ್ಥೆಯನ್ನು ಬಯಲಿಗೆಳೆದಿದ್ದರು.
ಈ ಅವ್ಯವಸ್ಥೆಯ ವರದಿ ಕುರಿತಂತೆ ರೋಗಿ ರೋಗಿಯ ಸಂಬಂಧಿಕರ ಅಭಿಪ್ರಾಯದ ಜೊತೆ ಸುದ್ಧಿ ಪ್ರಸಾರ ಮಾಡಿದ ನಿಮ್ಮ ಪಬ್ಲಿಕ್ ನೆಕ್ಸ್ಟ್ ಆಸ್ಪತ್ರೆಯಲ್ಲಿನ ಶೌಚಾಲಯಗಳ ಅವ್ಯವಸ್ಥೆ ಕುಡಿಯುವ ನೀರು ಇರದ ಪರಿಸ್ಥಿತಿ ಹಾಗೂ ಬೆಡ್ ಶೀಟ್ ನೀಡದಿರುವ ಬಗ್ಗೆ ಕ್ಷೇತ್ರದ ಶಾಸಕಿ ಕುಸುಮಾವತಿ ಶಿವಳ್ಳಿ ಸೇರಿದಂತೆ ಮಾನ್ಯ ಜಿಲ್ಲಾಧಿಕಾರಿಗಳವರೆಗೂ ಮಾಹಿತಿ ತಲುಪುವಂತೆ ಮಾಡಿತ್ತು.
ಸಧ್ಯ ಪಬ್ಲಿಕ್ ನೆಕ್ಸ್ಟ್ ವರದಿ ಫಲಶೃತಿಯಾಗಿ ತಾಲೂಕು ಆಸ್ಪತ್ರೆಯಲ್ಲಿ ಕೆಟ್ಟು ಮೂಲೆಗೆ ಸೇರಿದ್ದ ನೀರಿನ ಘಟಕ ದುರಸ್ತಿಯಾಗಿದ್ರೇ, ರೋಗಿಗಳಿಗೆ ಸಮರ್ಪಕವಾಗಿ ಬೆಡ್ ಶೀಟ್ ಜೊತೆ ಸೊಳ್ಳೆ ಪರದೆ ಹಾಗೂ ಪ್ರತಿ ಬೆಡ್'ಗೆ ಕರ್ಟನ್ ವ್ಯವಸ್ಥೆಯನ್ನು ತಾಲೂಕು ವೈದ್ಯಾಧಿಕಾರಿಗಳು ಮಾಡಿಸಿದ್ದಾರೆ.
ಇದಲ್ಲದೆ ಮಾನ್ಯ ಶಾಸಕಿ ಕುಸುಮಾವತಿ ಶಿವಳ್ಳಿ ಹೆಚ್ಚಿನ ನೀರಿನ ಘಟಕಕ್ಕೆ ಜಿಲ್ಲಾಧಿಕಾರಿ ಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರದಲ್ಲೇ ಅವುಗಳ ಆಸ್ಪತ್ರೆಗೆ ದೊರಕಿ ರೋಗಿಗಳಿಗೆ ನೆರವಾಗಲಿವೆ.
Kshetra Samachara
08/10/2021 09:45 pm