ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ನಿಮ್ಮೂರಲ್ಲೇ ಲಸಿಕಾ ಅಭಿಯಾನ ಬನ್ನಿ ಲಸಿಕೆ ಪಡೆಯಿರಿ - ಮಾದವ್ ಗಿತ್ತೇ

ಕುಂದಗೋಳ : ಪಟ್ಟಣ ಹಾಗೂ ಗ್ರಾಮೀಣ ಭಾಗದ ಸಾರ್ವಜನಿಕರನ್ನು ಕೋವಿಡ್ ಮಹಾಮಾರಿ ರೋಗದಿಂದ ರಕ್ಷಿಸುವ ಸಲುವಾಗಿ ನಾಳೆ ಮೆಗಾ ವ್ಯಾಕ್ಸಿನ್ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಎಲ್ಲರೂ ಈ ಅಭಿಯಾನದ ಪ್ರಯೋಜನ ಪಡೆಯುವಂತೆ ಕುಂದಗೋಳ ತಾಲೂಕಿನ ಲಸಿಕಾ ಅಭಿಯಾನದ ನೋಡಲ್ ಅಧಿಕಾರಿ ಐಎಎಸ್ ಮಾದವ್ ಗಿತ್ತೇ ಹೇಳಿದರು.

ತಹಶೀಲ್ದಾರ ಕಚೇರಿಯಲ್ಲಿ ಪತ್ರಕರ್ತರ ಸಭೆ ಕರೆದು ಮಾತನಾಡಿದ ಅವರು ಕುಂದಗೋಳ ತಾಲೂಕಿನ 26 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಗ್ರಾಮೀಣ ಮಟ್ಟದಲ್ಲಿ ವ್ಯಾಕ್ಸಿನ್ ಪಡೆಯದ 43000 ಜನರಿಗೆ ವ್ಯಾಕ್ಸಿನ್ ಅಭಿಯಾನ ಹಮ್ಮಿಕೊಂಡಿದೆ ಎಲ್ಲರೂ ಬಂದು ವ್ಯಾಕ್ಸಿನ್ ಪಡೆಯುವಂತೆ ಕನ್ನಡದಲ್ಲೇ ಮನವಿ ಮಾಡಿದರು.

ವಿಶೇಷವಾಗಿ ಗರ್ಭಿಣಿ ಬಾಣಂತಿಯರು ಸಹ ಲಸಿಕೆ ಪಡೆಯಬಹುದು ಇದರಿಂದ ನಿಮ್ಮ ಆರೋಗ್ಯದ ಜೊತೆ ಹುಟ್ಟುವ ಮಕ್ಕಳ ಆರೋಗ್ಯ ರಕ್ಷಣೆ ಆಗುತ್ತದೆ ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಮಹೇಶ್ ಕುರಿಯವರ ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

16/09/2021 08:10 pm

Cinque Terre

109.5 K

Cinque Terre

0

ಸಂಬಂಧಿತ ಸುದ್ದಿ