ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಳೆ ಸೆ.17 ಬೃಹತ್ ಕೋವಿಡ್ ಲಸಿಕಾ ಅಭಿಯಾನ 416 ತಂಡಗಳ ರಚನೆ...!

ಹುಬ್ಬಳ್ಳಿ: ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರವು ನಾಳೆ ಸೆಪ್ಟಂಬರ್ 17 ರಂದು ಬೃಹತ್ ಲಸಿಕಾ ಅಭಿಯಾನ ಹಮ್ಮಿಕೊಂಡಿದ್ದು, ಇದುವರೆಗೆ ಕೋವಿಡ್ ಲಸಿಕೆ ಪಡೆಯದಿರುವವರು ಹಾಗೂ ಎರಡನೇ ಡೋಸ್ ಲಸಿಕೆಗೆ ಅರ್ಹತೆ ಹೊಂದಿದವರಿಗೆ ಲಸಿಕೆ ನೀಡಲು ಜಿಲ್ಲೆಯಲ್ಲಿಯೂ ಬೃಹತ್ ಅಭಿಯಾನಕ್ಕೆ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಶಹರ ಹಾಗೂ ಗ್ರಾಮೀಣ ಭಾಗದಲ್ಲಿ ಲಸಿಕೆಗಳನ್ನು ನೀಡಲು 416 ತಂಡಗಳನ್ನು ರಚಿಸಲಾಗಿದೆ. ನಿಯೋಜಿತ ಎಲ್ಲಾ ತಂಡಗಳು ಇಂದೇ ಲಸಿಕೆಗಳನ್ನು ಸಂಗ್ರಹಿಸಿ, ಲಸಿಕೆ ನೀಡುವ ಸ್ಥಳದ ಕುರಿತು ತಮ್ಮ ವ್ಯಾಪ್ತಿಯ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಕೆ.ಪಾಟೀಲ ಅವರು ಸೂಚಿಸಿದ್ದಾರೆ.

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ನಡೆದ ಪೂರ್ವಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ವೈರಾಣುವಿನ ನಿಯಂತ್ರಿಸಿ ಆರೋಗ್ಯ ಕಾಪಾಡಿಕೊಳ್ಳಲು ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳು ಅತ್ಯಗತ್ಯವಾಗಿವೆ. ಸರ್ಕಾರವು ಎಲ್ಲರಿಗೂ ಈ ಲಸಿಕೆಗಳನ್ನು ಉಚಿತವಾಗಿ ನೀಡಿ ನಾಡಿನ ಜನರ ಸ್ವಾಸ್ಥ್ಯ ಕಾಪಾಡುವ ಮಹತ್ವಾಕಾಂಕ್ಷೆಯೊಂದಿಗೆ ನಾಳೆ.ಸೆ.17 ರಂದು ಬೃಹತ್ ಕೋವಿಡ್ ಲಸಿಕೆ ಅಭಿಯಾನ ಆಯೋಜಿಸಿದೆ. ಜಿಲ್ಲೆಯಲ್ಲಿಯೂ ಈ ಮೆಗಾ ಕಾರ್ಯಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಧಾರವಾಡ ಗ್ರಾಮೀಣ -55, ಧಾರವಾಡ ಶಹರ -24 , ಹುಬ್ಬಳ್ಳಿ ಶಹರ 49, ಹುಬ್ಬಳ್ಳಿ ಗ್ರಾಮೀಣ 27,ಕಲಘಟಗಿ 35, ಕುಂದಗೋಳ 42, ನವಲಗುಂದ‌ 34 , ಕಿಮ್ಸ್ ನ 150 ತಂಡಗಳು ಸೇರಿ ಒಟ್ಟು 416 ತಂಡಗಳನ್ನು ನಿಯೋಜಿಸಲಾಗಿದೆ. ಜೂನ್ 26 ಹಾಗೂ ಅದಕ್ಕಿಂತ ಪೂರ್ವದಲ್ಲಿ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದವರು, ಕೊವ್ಯಾಕ್ಸಿನ್ ಲಸಿಕೆ ಪಡೆದು 28 ದಿನಗಳು ಪೂರ್ಣಗೊಂಡವರು ಈ ಅಭಿಯಾನದಲ್ಲಿ ಎರಡನೇ ಡೋಸ್ ಪಡೆಯಬಹುದು. ಇಲ್ಲಿಯವರೆಗೆ ಲಸಿಕೆ ಪಡೆಯದಿರುವ 18 ವರ್ಷ ಮೇಲ್ಪಟ್ಟ ಎಲ್ಲರೂ ಮೊದಲ ಡೋಸ್ ಲಸಿಕೆ ಪಡೆಯಲು ಇದು ಸದವಕಾಶವಾಗಿದೆ. ಜಿಲ್ಲೆಯ ಜನತೆ ಹೆಚ್ಚು ಪ್ರಯೋಜನ ಪಡೆಯಬೇಕು ಎಂದರು.

Edited By : Nirmala Aralikatti
Kshetra Samachara

Kshetra Samachara

16/09/2021 12:53 pm

Cinque Terre

26.76 K

Cinque Terre

0

ಸಂಬಂಧಿತ ಸುದ್ದಿ