ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಡಿಮೆ ಸಮಯದಲ್ಲಿ ಬೆಳಗಾವಿಯಿಂದ ಧಾರವಾಡಕ್ಕೆ ಬಂತು ಕಿಡ್ನಿ

ಧಾರವಾಡ: ಕೇವಲ ಒಂದು ಗಂಟೆ ಹತ್ತು ನಿಮಿಷದ ಅವಧಿಯಲ್ಲಿ ಬೆಳಗಾವಿ ಕೆಎಲ್‌ಇ ಆಸ್ಪತ್ರೆಯಿಂದ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ಕಸಿ ಮಾಡುವ ಸಂಬಂಧ ಅಂಬ್ಯುಲೆನ್ಸ್‌ ಮೂಲಕ ಕಿಡ್ನಿಯನ್ನು ಯಶಸ್ವಿಯಾಗಿ ತರಲಾಗಿದೆ.

ಬೆಳಗಾವಿಯಿಂದ ಧಾರವಾಡ ತಾಲೂಕಿನ ನರೇಂದ್ರ ಕ್ರಾಸ್‌ವರೆಗೆ ಬಂದ ಅಂಬ್ಯುಲೆನ್ಸ್‌ಗೆ ಪೊಲೀಸರು ಎಸ್ಕಾರ್ಟ್‌ ನೀಡಿದ್ದರು. ಅಲ್ಲದೇ ಅಲ್ಲಿಂದ ಎಸ್‌ಡಿಎಂ ಆಸ್ಪತ್ರೆವರೆಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಕೂಡ ಕಲ್ಪಿಸಲಾಗಿತ್ತು.

ಜ್ಯುಬಿಲಿ ವೃತ್ತದಿಂದ ಅಂಬ್ಯುಲೆನ್ಸ್‌ಗೆ ಬಿಆರ್‌ಟಿಎಸ್‌ ರಸ್ತೆ ಮೂಲಕ ಸಾಗಲು ಝಿರೋ ಟ್ರಾಫಿಕ್‌ ವ್ಯವಸ್ಥೆ ಮಾಡಲಾಗಿತ್ತು. ಒಟ್ಟಾರೆ ಕಡಿಮೆ ಅವಧಿಯಲ್ಲಿ ಬೆಳಗಾವಿಯಿಂದ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ಕಿಡ್ನಿ ತಂದು ಯಶಸ್ವಿಯಾಗಿ ಕಸಿ ಮಾಡಲಾಗಿದೆ.

ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸಿದ ಹಾಗೂ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿಕೊಟ್ಟ ಪೊಲೀಸರು ಮತ್ತು ಬಿಆರ್‌ಟಿಎಸ್‌ ಸಂಸ್ಥೆಗೆ ಎಸ್‌ಡಿಎಂ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನಕುಮಾರ ಧನ್ಯವಾದ ಸಲ್ಲಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

16/08/2021 08:34 pm

Cinque Terre

89.38 K

Cinque Terre

10

ಸಂಬಂಧಿತ ಸುದ್ದಿ