ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಜಾನುವಾರುಗಳ ಚಿಕಿತ್ಸೆಗೆ ಸಿದ್ಧವಾಯಿತು ಪಾಲಿ ಕ್ಲಿನಿಕ್

ಧಾರವಾಡ : ಗ್ರಾಮೀಣ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ,ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪಾಲಿ ಕ್ಲಿನಿಕ್ ನ ನೂತನ ಕಟ್ಟಡ ಕಾಮಗಾರಿ ಮುಕ್ತಾಯದ ಹಂತ ತಲುಪಿದ್ದು, ಕೆಲವೇ ದಿನಗಳಲ್ಲಿ ಕಾರ್ಯಾರಂಭಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

ಕಳೆದ ನಾಲ್ಕು ವರ್ಷಗಳಿಂದ ನಗರದ ಜಿಲ್ಲಾಸ್ಪತ್ರೆಯ ಪರಿಕಲ್ಪನೆ ರೂಪದಲ್ಲಿ ಧಾರವಾಡ ಸಿವಿಲ್ ಆಸ್ಪತ್ರೆಯ ರಸ್ತೆಯಲ್ಲಿನ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಪಾಲಿ ಕ್ಲಿನಿಕ 2014ರಲ್ಲಿ ಆರಂಭಗೊಂಡು ಏಳು ವರ್ಷಗಳೇ ಸಂದಿವೆ.

ಆದರೆ ಸುಸಜ್ಜಿತ ಕಟ್ಟಡ, ತಜ್ಞ ವೈದ್ಯರ ಹಾಗೂ ಏಕ್ಸರೆಯಂತಹ ಯಂತ್ರಗಳ ಕೊರತೆ ಇತ್ತು. ಅದಕ್ಕಾಗಿ 2017ರಲ್ಲಿ ಪಾಲಿ ಕ್ಲಿನಿಕ್ ಗೆ ಹೊಸ ಸುಸಜ್ಜಿತ ಕಟ್ಟಡ ಮಂಜೂರು ಮಾಡಿ ,100 ಅಡಿ ಉದ್ದ ಹಾಗೂ 134 ಅಗಲದ ಜಾಗದಲ್ಲಿ ನಿರ್ಮಿಸಲು 2.17 ಕೋಟಿ ರೂ. ಅನುದಾನವನ್ನು ಸರಕಾರ ಒದಗಿಸಿತ್ತು.

ಹಲವಾರು ಅಡೆತಡೆಗಳ ಮಧ್ಯ ಇದೀಗ ಹೊಸ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಕ್ಲಿನಿಕ್ ಕಾರ್ಯಾರಂಭಕ್ಕೆ ಸಿದ್ಧವಾಗಿದೆ.

ಈ ಕುರಿತುಪಬ್ಲಿಕ್ ನೆಕ್ಸ್ಟ್ ಜೊತೆಗೆ ಪಾಲಿ ಕ್ಲಿನಿಕ್ ನ್ ಉಪ ನಿರ್ದೇಶಕ ಜಂಬೂನಾಥ ಗಂಡಿ ಮಾತನಾಡಿ,ರಾಜ್ಯದಲ್ಲಿ ಅತಿ ಹೆಚ್ಚು ಶಸ್ತ್ರ ಚಿಕಿತ್ಸೆ ಮಾಡಿರುವ ದಾಖಲೆ ಧಾರವಾಡದ ಪಾಲಿ ಕ್ಲಿನಿಕ್ ಗೆ ಇದೆ.

ಸದ್ಯ ಕಟ್ಟಡದ ಸಣ್ಣ-ಪುಟ್ಟ ಕೆಲಸಗಳಷ್ಟೇ ಬಾಕಿ ಉಳಿದಿದೆ. ಆದರೆ ಹೊಸ ಕಟ್ಟಡ ಕಾರ್ಯರಂಭದ ಜತೆಗೆ ತಜ್ಞ ಪರಿಣಿತರು ಹಾಗೂ ಸಿಬ್ಬಂದಿಗಳ ನೇಮಕವೂ ಆಗಬೇಕಿದೆ ಎಂದರು.

ಪಾಲಿ ಕ್ಲಿನಿಕ್ನ ವಿಶೇಷವೇನು?:

ಪಶುಗಳಿಗೆ ಔಷಧ ಶಾಸ್ತ್ರ, ಶಸ್ತ್ರ ಚಿಕಿತ್ಸೆ ಹಾಗೂ ಬಂಜೆತನ ನಿವಾರಣೆ ಮತ್ತು ಪ್ರಸೂತಿ ಶಾಸ್ತ್ರ ಈ ಮೂರು ವಿಭಾಗಗಳು ಪಾಲಿ ಕ್ಲಿನಿಕ್ ನಲ್ಲಿ ಕಾರ್ಯ ಆರಂಭ ಮಾಡಲಿವೆ.

ಈ ಮೂಲಕ ನೂರಿತ ತಜ್ಞರ ಸೇವೆ ನೀಡುವುದೇ ಈ ಕ್ಲಿನಿಕನ ಪರಿಕಲ್ಪನೆ ಆಗಿದ್ದು, ಸದ್ಯ ಹಳೆಯ ಕೊಠಡಿಯಲ್ಲಿ ನಡೆದಿರುವ ಕ್ಲಿನಿಕ್ ನಲ್ಲಿ ಹುದ್ದೆಗಳ ಮರು ವಿನ್ಯಾಸ ಆಗಿರುವ ಕಾರಣ ಮೂರು ಹುದ್ದೆಗಳು ಇಲ್ಲದಂತಾಗಿದೆ.

ಈ ಹಿಂದೆ ಇದ್ದ ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿಯನ್ನೇ ಮುಂದುವರಿಸಿ, ಪಾಲಿ ಕ್ಲಿನಿಕ್ ಗೆ ಮುಖ್ಯ ಪಶು ವೈದ್ಯಾಧಿಕಾರಿಯನ್ನಾಗಿ ನೀಡಲಾಗಿದೆ.

Edited By : Shivu K
Kshetra Samachara

Kshetra Samachara

10/08/2021 04:19 pm

Cinque Terre

41.36 K

Cinque Terre

0

ಸಂಬಂಧಿತ ಸುದ್ದಿ