ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಗುಡಗೇರಿಯಲ್ಲಿ ಯಶಸ್ವಿ ದಂತ ಚಿಕಿತ್ಸಾ ತಪಾಸಣಾ ಶಿಬಿರ

ಕುಂದಗೋಳ : ದೈನಂದಿನ ಜೀವನ ಶೈಲಿಯಲ್ಲಿ ದಂತಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿ ಹಲ್ಲುಗಳು ಮುಖದ ಸೌಂದರ್ಯ ಜೊತೆ ಆಹಾರ ಅಗಿಯಲು ಉತ್ತಮ ಜೀರ್ಣ ಕ್ರಿಯೆಗೂ ಸಹಕಾರಿ ಮತ್ತು ದಂತ ಕ್ಯಾನ್ಸರ್ ಕಾಳಜಿ ಎಲ್ಲರಿಗೂ ಅವಶ್ಯ ಎಂದು ದಂತ ವೈದ್ಯ ಉಮೇಶ್ ಎಚ್.ಆರ್ ಹೇಳಿದರು.

ಅವರು ತಾಲೂಕಿನ ಗುಡಗೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ದಂತ ಕ್ಯಾನ್ಸರ್ ಬಗ್ಗೆ ಸಾರ್ವಜನಿಕರಲ್ಲಿ ಎಚ್ಚರ ಮೂಡಿಸಿದರು.

ಇನ್ನೊರ್ವ ದಂತ ವೈದ್ಯ ವಿಧ್ಯಾಶ್ರೀ ಮಾತನಾಡಿ ಕೇವಲ ಗುಟ್ಕಾ, ತಂಬಾಕು, ಅಡಿಕೆ ಅಗೆಯುವುದುರಿಂದ ಮಾತ್ರವಲ್ಲ ಹಲ್ಲುಗಳು ಸ್ವಚ್ಚತೆಯಲ್ಲಿ ಎಂದು ಪೇರಾದರೂ ದಂತಗಳ ತೊಂದರೆ ಹುಲ್ಲು ನೋವು ವಸಡು ನೋವು ಸಾಮಾನ್ಯ ಎಂದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರೂಪಾ ತುರಮರಿ ಸಹ ಸಾರ್ವಜನಿಕರು ದಂತಗಳ ಸಂರಕ್ಷಣೆ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ ಗುಡಗೇರಿ ಹಾಗೂ ಸುತ್ತ ಮುತ್ತಲಿನ ಯುವಕರು ಹಾಗೂ ವಯೋವೃದ್ಧರ ದಂತಗಳ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಉಮೇಶ್ ಎಚ್. ಆರ್ ನಿರ್ವಹಿಸಿದರು.

ಈ ಸಂದರ್ಭದಲ್ಲಿ ವೈದ್ಯ ಎಸ್.ಎಮ್.ಬಿಂಕದಕಟ್ಟಿ, ದಂತ ಚಿಕಿತ್ಸಕಿ ವೈದ್ಯ ವಿದ್ಯಾಶ್ರೀ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರೂಪಾ ಹಳ್ಳಿಗರು ಹಾಗೂ ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿ ತಪಸಾಣೆ ಜೊತೆ ಚಿಕಿತ್ಸೆ ಪಡೆದುಕೊಂಡರು.

Edited By : Manjunath H D
Kshetra Samachara

Kshetra Samachara

15/02/2021 06:22 pm

Cinque Terre

37.73 K

Cinque Terre

1

ಸಂಬಂಧಿತ ಸುದ್ದಿ