ವರದಿ: ಈರಣ್ಣ ವಾಲಿಕಾರ
ಹುಬ್ಬಳ್ಳಿ - ಕೊರೊನಾ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೊವಿಡ್ ಲಸಿಕಾ ತ್ಯಾಜ್ಯವನ್ನು ವೈಜ್ಞಾನಿಕ ವಿಲೇವಾರಿಗೆ ಮುಂದಾಗಿದೆ. ಹೀಗಾಗಲೇ ಕೊರೊನಾ ಮಹಾಮಾರಿ ತಡೆಗಟ್ಟುವ ನಿಟ್ಟಿನಲ್ಲಿ ಕೊವಿಡ್ ಲಸಿಕಾ ವಿತರಣೆಯನ್ನು ದೇಶಾದ್ಯಂತ ಆರಂಭಿಸಲಾಗಿದೆ. ಆದ್ರೆ ಕೊವಿಡ್ ಲಸಿಕೆ ಹಾಕಿದ ನಂತರ ಉತ್ಪತ್ತಿಯಾಗುವ ಬಯೋ ಮೆಡಿಕಲ್ ತ್ಯಾಜ್ಯ ನಿರ್ವಹಣೆಯೂ ಕೂಡ ಪ್ರಮುಖ ಸವಾಲಿನ ಕೆಲಸವಾಗಿದೆ.
ಕೊರೊನಾ ತಡೆಗಟ್ಟುವುದರ ಜೊತೆಗೆ ಕೊರೊನಾ ಲಸಿಕೆಯಿಂದ ಉಂಟಾಗುವ ಬಯೋ ಮೆಡಿಕಲ್ ಗಳನ್ನು ಎಲ್ಲೆಂದರಲ್ಲಿ ಎಸೆಯುವದರಿಂದ ಕೊರೊನಾ ವೈರಸ್ ಹರಡುವ ಭೀತಿ ಇದೆ. ಹೀಗಾಗಿ ಜಿಲ್ಲಾ ಆರೋಗ್ಯ ಇಲಾಖೆ ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಕೈಗೊಂಡಿದೆ. ಕೋವಿಡ್ -19 ಲಸಿಕೆ ಸಂಬಂಧಿತ ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆಗಾಗಿ ಆರೋಗ್ಯ ಸಿಬ್ಬಂದಿಗೆ ಸರಿಯಾದ ತರಬೇತಿ ನೀಡಲಾಗಿದೆ. ಮೊದಲ ಹಂತದಲ್ಲಿ ಕೇವಲ 7 ಲಸಿಕಾ ಸೆಂಟರ ತೆರೆಯಲಾಗಿದೆ. ಮುಂದೆ ಜಿಲ್ಲೆಯ 70 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಒಂದು ಕೇಂದ್ರದಲ್ಲಿ ಐವರು ಸಿಬ್ಬಂದಿಗೆ ಬಯೋ ಮೆಡಿಕಲ್ ತ್ಯಾಜ್ಯ ನಿರ್ವಹಣೆಯ ತರಬೇತಿ ನೀಡಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 350 ಸಿಬ್ಬಂದಿಗಳು ಬಯೋ ಮೆಡಿಕಲ್ ತ್ಯಾಜ್ಯವನ್ನು ನಿರ್ವಹಣೆ ಮಾಡಲಿದ್ದಾರೆ..
ಲಸಿಕೆ ಹಾಕಿದ ನಂತರ ಉತ್ಪತ್ತಿಯಾಗುವ ಸೀರಿಂಜ್, ರ್ಯಾಪರ್, ಬಾಟಲ್ ಗಳನ್ನು ವಿಂಗಡಣೆ ಮಾಡಬೇಕಾಗುತ್ತದೆ. ಇದಕ್ಕಾಗಿ ಕೆಂಪು, ಹಳದಿ, ಹಾಗೂ ಕಪ್ಪು ಬಣ್ಣ ಮೂರು ಪ್ರತ್ಯೇಕ ಡಬ್ಬಾಗಳಲ್ಲಿ ಸಂಗ್ರಹಿಸುವ ಬಗ್ಗೆ ಆರೋಗ್ಯ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದ್ದು, ಆರೋಗ್ಯ ಸಿಬ್ಬಂದಿ ಪ್ರತ್ಯೇಕಿಸಿದ ತ್ಯಾಜ್ಯವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗುತ್ತದೆ. ಬಳಿಕ ಕಾಮನ್ ಟ್ರಿಟಮೆಂಟ್ ಸ್ಪೆಷಿಲಿಟಿ ಸಿಬ್ಬಂದಿ ಸಂಗ್ರಹಿಸಿದ ತ್ಯಾಜ್ಯವನ್ನು ತಗೆದುಕೊಂಡು ಹೋಗಿ ರಿಸೈಕಲ್ ಮಾಡಿ ಮತ್ತೆ ಪುನರ್ ಬಳಕೆ ಮಾಡಲಾಗುತ್ತದೆ. ಇದರಿಂದ ಮತ್ತೊಮ್ಮೆ ಸೋಂಕು ಹರಡುವುದನ್ನು ತಡೆಯಬಹುದು ಹಾಗೂ ಬಯೋಮೆಡಿಕಲ್ ತ್ಯಾಜ್ಯಗಳನ್ನು ಸರಿಯಾದ ನಿರ್ವಹಣೆ ಮಾಡಿ ಪುನರ್ ಬಳಕೆ ಮಾಡುವದರಿಂದ ವೈದ್ಯಕೀಯ ಕ್ಷೇತ್ರಕ್ಕೆ ಆರ್ಥಿಕ ನಷ್ಟವನ್ನು ತಗ್ಗಿಸಬಹುದು. ಇದಕ್ಕಾಗಿ ಧಾರವಾಡ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೂಕ್ತ ತರಬೇತಿ ನೀಡಿದ ಸಿಬ್ಬಂದಿ ಬಳಕೆ ಮಾಡಿಕೊಂಡಿರುವದು ಸ್ವಾಗತಾರ್ಹವಾಗಿದೆ....!
Kshetra Samachara
18/01/2021 02:41 pm