ನವಲಗುಂದ : ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಇಂದು ಕೋವಿಡ್-19 ಲಸಿಕೆ ನೀಡುತ್ತಿರುವ ಹಿನ್ನೆಲೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಉದ್ಘಾಟನೆಯನ್ನು ನವಲಗುಂದ ತಹಸೀಲ್ದಾರ್ ನವೀನ್ ಹುಲ್ಲೂರ್ ಅವರು ನೆರವೇರಿಸಿದರು.
ನಂತರ ಪ್ರಥಮವಾಗಿ ಆಸ್ಪತ್ರೆಯ ಸಿಬ್ಬಂದಿಳಿಗೆ ಲಸಿಕೆ ನೀಡಲಾಯಿತು. ಒಟ್ಟು 70 ಜನರಿಗೆ ಇಂದು ಲಸಿಕೆ ನೀಡಲಾಗುತ್ತಿದೆ. ಇನ್ನು ಕಾರ್ಯಕ್ರಮದಲ್ಲಿ ನವಲಗುಂದ ತಹಸೀಲ್ದಾರ್ ನವೀನ್ ಹುಲ್ಲೂರ್, ತಾಲೂಕ ವೈದ್ಯಧಿಕಾರಿಗಳಾದ ರೂಪಾ ಕಿಣಗಿ, ಪುರಸಭೆ ಅಧ್ಯಕ್ಷ ಮಂಜುನಾಥ್ ಜಾಧವ್, ಸಿಪಿಐ ಚಂದ್ರಶೇಖರ ಮಠಪತಿ, ಪುರಸಭೆ ಮುಖ್ಯಧಿಕಾರಿಗಳಾದ ಖುದಾನವರ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು. ಇನ್ನು ಈ ಬಗ್ಗೆ ತಾಲೂಕ ವೈದ್ಯಧಿಕಾರಿಗಳಾದ ರೂಪಾ ಕಿಣಗಿ ಹೇಳಿದ್ದು ಹೀಗೆ...
Kshetra Samachara
16/01/2021 04:43 pm