ಧಾರವಾಡ: ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪಶು ಚಿಕಿತ್ಸಾ ವಿಭಾಗದ ವೈದ್ಯ ಡಾ. ಅನಿಲಕುಮಾರ ಪಾಟೀಲ ಮತ್ತು ತಂಡವು ಶ್ವಾನವೊಂದಕ್ಕೆ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಜೀವ ಉಳಿಸಿದ್ದಾರೆ.
ಹುಬ್ಬಳ್ಳಿಯ ವ್ಯಕ್ತಿಯೊಬ್ಬರಿಗೆ ಸೇರಿದ ಲಾಬೋಡಾರ್ ನಾಯಿಗೆ ಅಬ್ದೋಮಿನಲ್ ಟ್ಯೂಮರ್ (ಕ್ಯಾನ್ಸರ್ ಗಡ್ಡೆ) ಕಾಣಿಸಿಕೊಂಡಿತ್ತು. ಇದೇ ನಾಯಿಗೆ ಒಂದೂವರೆ ವರ್ಷ ಇದ್ದಾಗಲೂ ಸಹ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ ಕಳೆದ ಹತ್ತು ದಿನಗಳಿಂದ ಯಾವುದೇ ಆಹಾರ ಸೇವಿಸದೇ ಒದ್ದಾಡುತ್ತಿತ್ತು. ಏನೇ ತಿಂದರೂ ವಾಂತಿ ಮಾಡಿಕೊಳ್ಳುತ್ತಿತ್ತು.
ನಾಯಿಯನ್ನು ಡಾ. ಅನಿಲಕುಮಾರ ಅವರ ಬಳಿ ಚಿಕಿತ್ಸೆಗಾಗಿ ತರಲಾಗಿತ್ತು. ಈ ವೇಳೆ ಸೋನೋಗ್ರಾಫಿ ಮಾಡಿ ನೋಡಿದಾಗ ಹೊಟ್ಟೆಯೊಳಗೆ ಗಂಟುಗಳಿರುವುದು ಪತ್ತೆಯಾಗಿದ್ದವು. ಆಗ ಆಸ್ಪತ್ರೆಯಲ್ಲಿದ್ದ ಉಪಕರಣಗಳಲ್ಲೇ ಡಾ.ಅನೀಲ ಕುಮಾರ್ ನೇತೃತ್ವದ ತಂಡವು ಸತತ ಮೂರು ಗಂಟೆಗಳ ಕಾಲ ತುರ್ತು ಶಸ್ತ್ರಚಿಕಿತ್ಸೆ ಮಾಡಿ 10 ಗಡ್ಡೆಗಳನ್ನು ಹೊರ ತೆಗೆದಿದ್ದಾರೆ. ಇಷ್ಟು ಸಂಖ್ಯೆಯಲ್ಲಿ ಕ್ಯಾನ್ಸರ್ ಗಡ್ಡೆಗಳು ಬೆಳೆಯುವುದು ಅಪರೂಪ ಎಂದು ವೈದ್ಯರು ಹೇಳಿದ್ದಾರೆ.
Kshetra Samachara
10/01/2021 10:27 am