ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜ.8ಕ್ಕೆ ಕೊರೊನಾ ಲಸಿಕೆಯ ಪ್ರಯೋಗಾರ್ಥಕ ಅಣಕು ಪರೀಕ್ಷೆ

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಜ.8 ರಂದು ಜಿಲ್ಲೆಯ ಆಯ್ದ 8 ಆಸ್ಪತ್ರೆಗಳಲ್ಲಿ ಲಸಿಕೆಯ ಸಾಗಣೆಯಿಂದ ಹಿಡಿದು, ಅದನ್ನು ವ್ಯಕ್ತಿಗೆ ಹಾಕುವವರೆಗೆ ಪ್ರತಿಯೊಂದು ಹಂತಗಳ ಪ್ರಯೋಗಾರ್ಥಕ ಅಣುಕು ಲಸಿಕೆ ( Dry Run) ಪರೀಕ್ಷೆ ಕೈಗೊಳ್ಳಲು ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ಧವಾಗಿವೆ.

ಧಾರವಾಡದ ಜಿಲ್ಲಾ ಆಸ್ಪತ್ರೆ, ಪುರೋಹಿತ ನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಹುಬ್ಬಳ್ಳಿಯ ಕಿಮ್ಸ್, ಸಂಜೀವಿನಿ ಆಯುರ್ವೇದ ವೈದ್ಯಕೀಯ ಕಾಲೇಜು, ಸುಚಿರಾಯು ಆಸ್ಪತ್ರೆ, ಗರಗ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ, ನವಲಗುಂದ ತಾಲೂಕು ಆಸ್ಪತ್ರೆ ಹಾಗೂ ಸತ್ತೂರಿನ ಎಸ್ ಡಿ ಎಂ ಆಸ್ಪತ್ರೆಗಳಿಗೆ ಅಂದು ಈ ಪ್ರಯೋಗಾರ್ಥ ಪರೀಕ್ಷೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Edited By : Nagaraj Tulugeri
Kshetra Samachara

Kshetra Samachara

06/01/2021 08:13 pm

Cinque Terre

29.41 K

Cinque Terre

1

ಸಂಬಂಧಿತ ಸುದ್ದಿ