ಹುಬ್ಬಳ್ಳಿ: ಮಾನಸಿಕ ನೆಮ್ಮದಿಗಾಗಿ ಸಮಯದ ಸದ್ಬಳಕೆ ಮಾಡಿಕೊಂಡು ಧ್ಯಾನ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ದಿಸಿಕೊಳ್ಳಬಹುದು ಎಂದು ಬ್ರಹ್ಮರ್ಷಿ ಸುಭಾಷ್ ಪತ್ರೀಜಿ ಹೇಳಿದರು.
ನಗರದ ಪಿರಾಮಿಡ್ ಧ್ಯಾನಮಂದಿರದಲ್ಲಿ ಆಯೋಜಿಸಲಾಗಿದ್ದ ಧ್ಯಾನ ಸತ್ಸಂಗ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಧ್ಯಾನ ಮಾಡುವುದರಿಂದ ಸರ್ವಸ್ವವನ್ನೂ ಪಡೆಯಬಹುದಾಗಿದೆ.ಧ್ಯಾನ ದೈಹಿಕ ಹಾಗೂ ಮಾನಸಿಕ ಸದೃಡತೆಯನ್ನು ಹೆಚ್ಚಿಸುವ ಸನ್ಮಾರ್ಗವಾಗಿದೆ ಎಂದರು.
ಧ್ಯಾನ ಅಂದರೆ ದೊಡ್ಡ ಮಂತ್ರ ತಂತ್ರವಲ್ಲ ಮನೆಯಲ್ಲಿಯೇ ಕುಳಿತುಕೊಂಡು ಕಣ್ಣು ಮುಚ್ಚಿಕೊಂಡು ಉಸಿರಾಟದ ಮೇಲೆ ನಿಗಾವಹಿಸಿ ಕೂಡುವುದೇ ಧ್ಯಾನ ಎಂದು ಅವರು ಸಲಹೆ ನೀಡಿದರು
Kshetra Samachara
05/01/2021 12:11 pm