ಹುಬ್ಬಳ್ಳಿ: ಕೊರೋನಾ ಮೂರನೇ ಅಲೆಯ ಎಚ್ಚರಿಕೆ ಹಿನ್ನಲೆಯಲ್ಲಿ ಹುಬ್ಬಳ್ಳಿಯ ಪ್ರಸಿದ್ಧ ಶ್ರೀ ಸಿದ್ಧಾರೂಢ ಸ್ವಾಮಿಗಳ 92 ಪುಣ್ಯಾರಾಧನೆಯ ತೆಪ್ಪೋತ್ಸವ ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ.
ಹೌದು..ಅಗಷ್ಟ್ 23 ರಂದು ನಡೆಯಬೇಕಿದ್ದ ತೆಪ್ಪೋತ್ಸವ ರದ್ದು ಮಾಡಿದ್ದು, ಸರ್ಕಾರದ ಬಿಗಿ ನಿಯಮ ಹಿನ್ನಲೆಯಲ್ಲಿ ರಥೋತ್ಸವ ರದ್ದುಗೊಳಿಸಿದ ಮಠದ ಟ್ರಸ್ಟ್ ಕಮೀಟಿ ನಿರ್ಧಾರ ಕೈಗೊಂಡಿದ್ದಾರೆ.
ಇನ್ನೂ ಸಿದ್ಧಾರೂಢ ಟ್ರಸ್ಟ್ ಕಮೀಟಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೇ ಕಳೆದ ವರ್ಷ ಮತ್ತು ಈ ವರ್ಷ ತೆಪ್ಪೋತ್ಸವ ರದ್ದಾಗಿದೆ.
Kshetra Samachara
18/08/2021 12:02 pm