ಕುಂದಗೋಳ : ಕೊರೊನಾ ನಿಯಂತ್ರಣಕ್ಕೆ ಪಣ ತೊಟ್ಟಿರುವ ಸರ್ಕಾರ ಸದ್ಯ ಮಾಸ್ಕ್ ಹಾಕದೆ ಸಂಚರಿಸುವವರಿಗೆ ದಂಡದ ಬಿಸಿ ನೀಡುತಿದ್ದು ಇಂದು ಕುಂದಗೋಳ ಲಕ್ಷ್ಮೇಶ್ವರ ರಸ್ತೆಯಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಉಚಿತವಾಗಿ ಮಾಸ್ಕ್ ನೀಡಿ ಕೊರೊನಾ ಜಾಗೃತಿ ಜೊತೆ ಸಖತ್ ದಂಡ ವಸೂಲಿ ಮಾಡುತ್ತಿದ್ದಾರೆ.
ಗ್ರಾಮೀಣ ಪೊಲೀಸ್ ಠಾಣೆಯ ಸಹಕಾರದೊಂದಿಗೆ ಮಾಸ್ಕ್ ಇಲ್ಲದೆ ಸಂಚರಿಸುವ ಖಾಸಗಿ ವಾಹನ ಸವಾರರನ್ನು ನಿಲ್ಲಿಸಿ ಉಚಿತವಾಗಿ ಮಾಸ್ಕ್ ನೀಡಿ ಮಾಸ್ಕ್ ಹಾಕದ್ದಕ್ಕೆ ದಂಡ ವಸೂಲಿ ಮಾಡುತ್ತಿದ್ದು ಇನ್ನು ರೈತರು, ಕೂಲಿ ಕಾರ್ಮಿಕರು ಹಾಗೂ ರೈತಾಪಿ ದಾರಿಹೋಕ ಜನರನ್ನು ಸ್ವತಃ ಕೂಗಿ ಕರೆದು ಉಚಿತವಾಗಿ ಮಾಸ್ಕ್ ನೀಡಿ ಕೊರೊನಾ ಬಗ್ಗೆ ವಹಿಸಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸುತ್ತಿದ್ದು ಈ ಹುಬ್ಬಳ್ಳಿ ಲಕ್ಷ್ಮೇಶ್ವರ ರಸ್ತೆಯಲ್ಲಿ ಕೇವಲ ಒಂದೇ ತಾಸಿನಲ್ಲಿ 30 ಕೇಸ್ ದಾಖಲಿಸಿ ದಂಡ ವಿಧಿಸಿದ್ದಾರೆ.
Kshetra Samachara
03/10/2020 07:04 pm