ಹುಬ್ಬಳ್ಳಿ: ಮೂರು ದಿನಗಳ ಹಿಂದೆ ಲೋ ಬಿಪಿ ಹಾಗೂ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವೃದ್ದೆಗೆ ಬಿಲ್ ಕಟ್ಟಿದ ನಂತರ ವೃದ್ದೆ ಕೊರೋನಾದಿಂದ ಸಾವು ಎಂದು ಆಸ್ಪತ್ರೆಯಿಂದ ಸ್ಪಷ್ಟನೆ ನೀಡಿರುವುದನ್ನು ಖಂಡಿಸಿ ವೃದ್ಧೆಯ ಸಂಬಂಧಿಕರು ಆಸ್ಪತ್ರೆಯ ವಿರುದ್ಧ ಪ್ರತಿಭಟನೆ ನೀಡಿದರು.
ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ವೃದ್ದೆಯ ಸಂಬಂಧಿಕರು ಪ್ರತಿಭಟನೆ ನಡೆಸಿ ಹುಬ್ಬಳ್ಳಿಯ ಕೆಎಲ್ ಇ ಸಂಸ್ಥೆಯ ಸುಚಿರಾಯ ಆಸ್ಪತ್ರೆಯ ವಿರುದ್ಧ ಘೋಷಣೆ ಕೂಗಿದರು.
ವೃದ್ದೆಯ ಸಂಬಂಧಿಕರಿಂದ 1.20 ಲಕ್ಷ ರೂಪಾಯಿ ಬಿಲ್ ಕಟ್ಟಿಸಿಕೊಂಡ ನಂತರ ವೃದ್ದೆ ಸಾವು ಎಂದ ಆಸ್ಪತ್ರೆಯ ವೈದ್ಯರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಇನ್ನೂ ಪ್ರತಿಭಟನಾಕಾರರ ಮನವೊಲಿಸಲು ಬಂದ ಪೊಲೀಸರ ಜೊತೆ ಕೆಲಕಾಲ ಸಂಬಂಧಿಕರ ವಾಗ್ವಾದ ನಡೆಯಿತು.ಕೊರೊನಾ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿರುವುದಾಗಿ ಆರೋಪಿಸಿದ ಸಂಬಂಧಿಕರು ಪ್ರತಿಭಟನೆ ನಡೆಸಿದರು.
Kshetra Samachara
18/09/2020 02:13 pm