ಅಳ್ನಾವರ : ಕೊರೊನಾ ಮೂರನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಅಳ್ನಾವರ ಪಟ್ಟಣ್ದಲ್ಲಿ ಕೊರೊನಾ ನಿಯಮಗಳು ಹಾಗೂ ವಾರಾಂತ್ಯ ಕರ್ಫ್ಯೂಗೆ ಸಹಕರಿಸದ ಸಾರ್ವಜನಿಕರು ಹಾಗೂ ವ್ಯಾಪಾರಿಗಳಿಗೆ ಪೊಲೀಸರು ಭರ್ಜರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ.
ವೀಕೆಂಡ್ ಕರ್ಫ್ಯೂ ಹಾಗೂ ನಿಯಮಗಳನ್ನು ಪಾಲಿಸದವರಿಗೆ ಅಳ್ನಾವರ ಠಾಣೆ ಪಿಎಸ್‌ಐ ಎಸ್.ಆರ್ ಕಣವಿ ನೇತೃತ್ವದ ತಂಡದವರು ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ. ಇದುವರೆಗೂ ಒಟ್ಟು 350ಕ್ಕೂ ಹೆಚ್ಚು ನಿಯಮ ಉಲ್ಲಂಘನೆ ಕೇಸ್‌ಗಳನ್ನ ದಾಖಲಿಸಿದ್ದಾರೆ.
ಇನ್ನಾದರೂ ವಾರಾಂತ್ಯ ಕರ್ಫ್ಯೂ ಹಾಗೂ ಕೊರೊನಾ ನಿಯಮಗಳನ್ನು ಶಿಸ್ತು ಬದ್ಧವಾಗಿ ಪಾಲಿಸಿ, ಮಾಹಾಮಾರಿ ಓಮಿಕ್ರಾನ್ ನನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸ ಬೇಕು ಎಂದು ಅಳ್ನಾವರ ಪೊಲೀಸ್ ಠಾಣೆ ಪಿಎಸ್‌ಐ ಎಸ್.ಆರ್ ಕಣವಿ ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ ಮಾಡಿದ್ದಾರೆ.
ಮಹಾಂತೇಶ ಪಠಾಣಿ
ಪಬ್ಲಿಕ್ ನೆಕ್ಸ್ಟ್
ಅಳ್ನಾವರ.
Kshetra Samachara
19/01/2022 06:11 pm