ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: 68ರ ಇಳಿವಯಸ್ಸಿನ ಯೋಗ ಸಾಧಕ ಬಸವರಾಜ ನಾಯ್ಕರ್!

ಕುಂದಗೋಳ: ವಯಸ್ಸು ಅರತ್ತೆಂಟಾದರೂ ದೇಹ ಹುರಿಗೊಳಿಸುವ ಹುಮ್ಮುಸ್ಸು, ಮುನ್ನುಗ್ಗಬಲ್ಲ ಚೈತನ್ಯ, ಲವಲವಿಕೆಯ ಒಡನಾಟ, ನಿತ್ಯ ಒಂದು ತಾಸು ಹಠಯೋಗದ ಸಾಧನೆ ಆಸಕ್ತರಿಗೆ ಆ ಸಾಧನೆ ಧಾರೆ ಎರೆಯುವ ಕೌಶಲ್ಯ.

ಇದು ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ಬಸವರಾಜ ಕಬೀರಪ್ಪ ನಾಯ್ಕರ್ ಅವರ ನಿತ್ಯದ ದಿನಚರಿ. ಯೋಗದ ಪ್ರತಿ ಮಜಲನ್ನು ಅರಿತು ಶ್ವಾಸದಿಂದಲೇ ದೇಹ ಮನಸ್ಸನ್ನು ನಿಯಂತ್ರಿಸುವ ನಾನಾ ಯೋಗದ ಮಜಲನ್ನು ಅರಿತ ಬಸವರಾಜ ನಾಯ್ಕರ್ ಅವರು ಯೋಗದ ಜಲನೀತಿಯಲ್ಲಿ ಎತ್ತಿದ ಕೈ.

ಯುವಕರೇ ಮಾಡಲು ಕಷ್ಟ ಪಡುವ ಯೋಗದ ಆಸನಗಳನ್ನು 68ರ ಇಳಿವಯಸ್ಸಿನಲ್ಲೂ ಸರಾಗವಾಗಿ ಮಾಡುವ ಬಸವರಾಜ ನಾಯ್ಕರ್ ಅವರ ಕುಟುಂಬಕ್ಕೆ ಯೋಗ ಒಲಿದಿದ್ದು ಸಿದ್ಧಾರೂಢರ ಹಸ್ತದಿಂದ ಆ ಯೋಗವನ್ನು ವರನಟ ಡಾ.ರಾಜಕುಮಾರ್‌ಗೆ ಧಾರೆ ಎರೆದಿದ್ದು ಈ ಕುಂದಗೋಳ ತಾಲೂಕಿನ ಪಶುಪತಿಹಾಳದ ನಾಯ್ಕರ್ ಕುಟುಂಬವೇ.

ಯಾವುದೇ ಗುರುವಿಲ್ಲದೆ ತಮ್ಮ ಚಿಕ್ಕಪ್ಪನ ಸಹಕಾರದಿಂದ ಯೋಗ ಕಲಿತ ಬಸವರಾಜ ನಾಯ್ಕರ್, ಯೋಗದ ಪ್ರತಿ ಕಲೆ ಆ ಯೋಗ ಕಲೆಯಿಂದ ಉಂಟಾಗುವ ಪ್ರಯೋಜನದ ಹೊತ್ತಿಗೆಯನ್ನೇ ಸಿದ್ಧ ಪಡಿಸಿದ್ದಾರೆ.

ನಿತ್ಯ ಒಂದು ತಾಸು ಹಠಯೋಗ ಮನಸ್ಸು ಇಚ್ಚಿಸಿದಾಗ ಈಜನ್ನು ಕೈಗೊಳ್ಳುವ ಇವರು ಶಾಲೆ, ಕಾಲೇಜು ಸೇರಿ ಅದೆಷ್ಟೋ ಯುವಕರಿಗೆ ಯೋಗದ ಕಲೆಯ ಮಾರ್ಗದರ್ಶನ ಮಾಡಿ ಸಾಧನೆ ಗೈದರೂ ಸುದ್ಧಿಯಾಗದೆ ತಮ್ಮ ಕರ್ತವ್ಯದಲ್ಲೇ ದೇವರನ್ನು ಕಂಡವರು.

ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ ಕುಂದಗೋಳ

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/06/2022 05:45 pm

Cinque Terre

96.69 K

Cinque Terre

4

ಸಂಬಂಧಿತ ಸುದ್ದಿ