ಹುಬ್ಬಳ್ಳಿ: ಇಲ್ಲೊಬ್ಬರು ಮಹಾತಾಯಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ವಯೋಸಹಜ ಕಾರಣದಿಂದ ಸಾವನ್ನಪ್ಪಿದ ಈ ತಾಯಿ ಕಣ್ಣು ಮತ್ತು ದೇಹ ದಾನ ಮಾಡಿದ್ದಾರೆ.
ಹೌದು… ಹುಬ್ಬಳ್ಳಿಯ ಭಾಗ್ಯಲಕ್ಷ್ಮೀ ನಗರದ ರಾಜೀವ ನಗರದ ನಿವಾಸಿ, ಪತ್ರಕರ್ತ ವೀರೇಶ ಹಂಡಗಿಯವರ ತಾಯಿ ಆಧುನಿಕ ವಚನಕಾರ್ತಿ, ಶಿವಲೀಲಾ ಹಂಡಗಿ ಅವರು ನಿನ್ನೆ ನಿಧನರಾಗಿದ್ರು. ತಾಯಿಯ ಇಚ್ಛೆಯಂತೆ ಮಕ್ಕಳು ಶಿವಲೀಲಾ ಅವರ ನೇತ್ರದಾನ ಮತ್ತು ದೇಹದಾನ ಮಾಡಿದ್ದಾರೆ. ಮೃತರ ನೇತ್ರಗಳನ್ನು ಡಾ.ಎಂ.ಎಂ.ಜೋಶಿ ನೇತ್ರ ಭಂಡಾರಕ್ಕೆ ದಾನವಾಗಿ ನೀಡಿ ಇಬ್ಬರ ಅಂಧರ ಬಾಳಿಗೆ ಬೆಳಕಾಗಿದ್ದಾರೆ.
ಅಷ್ಟೇ ಅಲ್ಲದೇ ವೈದ್ಯ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆಂದು ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಮುಖಾಂತರ ದೇಹವನ್ನು ಬೈಲಹೊಂಗಲದ ಎಸ್. ಜಿ. ವಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಾನವಾಗಿ ನೀಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
Kshetra Samachara
29/05/2022 12:52 pm