ಧಾರವಾಡ: ಜರ್ಮನ್ ಶಫರ್ಡ್ ನಾಯಿಯೊಂದು ರಕ್ತದಾನ ಮಾಡಿ ಮತ್ತೊಂದು ನಾಯಿಯ ಜೀವ ಉಳಿಸಿರುವ ಅಪರೂಪದ ಘಟನೆ ಧಾರವಾಡದಲ್ಲಿ ನಡೆದಿದೆ.
ವಿಜಯಪುರದ RAT ವಿಲ್ಲರ್ ನಾಯಿ ಅನಾರೋಗ್ಯದಿಂದ ಬಳಲುತ್ತಿತ್ತು. ಅದರ ಉಳಿಸುವ ಉದ್ದೇಶದಿಂದ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಡಾ.ಅನಿಲ ಪಾಟೀಲ ಅವರನ್ನು ನಾಯಿಯ ಮಾಲೀಕರು ಸಂಪರ್ಕ ಮಾಡಿದ್ದರು.
ಅದರಂತೆ ಡಾ.ಅನಿಲ ಅವರು, ಶ್ವಾನ ಪ್ರಿಯ ಸೋಮಶೇಖರ ಅವರನ್ನು ಸಂಪರ್ಕಿಸಿ ಒಂದು ನಾಯಿಯಿಂದ ರಕ್ತದಾನ ಮಾಡಿಸುವಂತೆ ವಿನಂತಿಸಿದ್ದರು. ವೈದ್ಯರ ಕೋರಿಕೆ ಮೇರೆಗೆ ಸೋಮಶೇಖರ ಅವರು ತಮ್ಮ ಜರ್ಮನ್ ಶಫರ್ಡ್ ನಾಯಿ ಮೂಲಕ RAT ವಿಲ್ಲರ್ ಶ್ವಾನಕ್ಕೆ ರಕ್ತದಾನ ಮಾಡಿಸಿದ್ದಾರೆ. ಇದರಿಂದ ಆತಂಕದಲ್ಲಿದ್ದ ವಿಜಯಪುರದ ಶ್ವಾನದ ಮಾಲೀಕರು ನಿರಾಳರಾಗಿದ್ದಾರೆ.
Kshetra Samachara
07/10/2021 08:41 pm