ಹುಬ್ಬಳ್ಳಿ- ಈ ಭೂಮಿಯ ಮೇಲೆ ಹುಟ್ಟಿದ ಪ್ರತಿ ಜೀವಿಯು ಒಂದಲ್ಲಾ ಒಂದು ದಿನ ಮಣ್ಣಾಗಲೇ ಬೇಕು. ಸಾವು ಸಹಜವಾಗಿಯೇ ಬರಬಹುದು ಅಥವಾ ಅನಾಹುತದಿಂದ ಸಂಭವಿಸಬಹುದು. ಒಬ್ಬ ಮನುಷ್ಯ ಸತ್ತ ಮೇಲೆ ಈ ಸಮಾಜಕ್ಕೆ ಏನು ಕೊಡುಗೆ ಕೊಟ್ಟ ಎಂಬ ಗುರುತು ಮಾತ್ರ ಉಳಿಯುತ್ತದೆ. ಆ ಗುರುತು ಉಳಿಯುವ ಹಾಗೆ ಬದುಕುವವರ ಸಂಖ್ಯೆ ವಿರಳ. ಆದರೆ ಹವಾಲ್ದಾರ್ ಒಬ್ಬರು ಜೀವ ಹೋದ ನಂತರವೂ ಸಮಾಜದಲ್ಲಿ ಗುರುತು ಉಳಿಯುವಂತಹ ಕೆಲಸ ಮಾಡಿ ಹೋಗಿದ್ದಾರೆ.
ಹೌದು,,, ಹುಬ್ಬಳ್ಳಿಯ ನೇಕಾರ ನಗರದ ನಿವಾಸಿ ನಿವೃತ್ತ ಹವಾಲ್ದಾರ್ ಶಂಕರ ನಾಗಪ್ಪ ಪಾವಟೆ ಎಂಬುವವರು ಸಾವನ್ನಪ್ಪಿದ್ದು, ಅವರ ಅಪೇಕ್ಷೆಯಂತೆ ಕುಟುಂಬಸ್ಥರು ಮೃತದೇಹವನ್ನ ಬೈಲ್ ಹೊಂಗಲದ ಎಸ್ ವಿಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿಗೆ ದಾನ ಮಾಡಿದ್ದಾರೆ. ಶಂಕರ ಅವರು ಈ ಹಿಂದೆ ತಮ್ಮ ಮೃತದೇಹವನ್ನ ದಾನ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಇಂದು ಕಿಮ್ಸ್ ನಲ್ಲಿ ಮೃತಪಟ್ಟ ನಂತರ ಅವರ ಆಸೆಯಂತೆಯೇ ಬೈಲ್ ಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಮುಖಾಂತರ ದೇಹವನ್ನು ಆವರ ಪತ್ನಿ, ಮಗಳು, ಬಂಧುಗಳು ಹಾಗೂ ಸ್ನೇಹಿತರ ಸಮಕ್ಷಮದಲ್ಲಿ ಹಸ್ತಾಂತರಿಸಲಾಯಿತು.ಇನ್ನು ಶಂಕರ ದೇಹದಾನ ಅಷ್ಟೇ ಅಲ್ಲದೇ ಬೆಳಗಾವಿಯ ಕೆಎಲ್ ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಚರ್ಮ ಭಂಡಾರಕ್ಕೆ ಚರ್ಮದಾನದ ಮುಖಂತರ ಸುಟ್ಟ ರೋಗಿಗೆ ಜೀವದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
Kshetra Samachara
04/09/2021 09:17 pm