ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಫೋರ್ಬ್ಸ್ ಮ್ಯಾಗಜೀನ್ ನಲ್ಲಿ ಮಿಂಚು ಹರಿಸಿದ ಹುಬ್ಬಳ್ಳಿಯ ಲೇಸರ್ ಕ್ರಾಂತಿಯ ವೈದ್ಯ

ಹುಬ್ಬಳ್ಳಿ: ದಂತ ವೈದ್ಯಕೀಯ ‌ಕ್ಷೇತ್ರದಲ್ಲಿ ದೇಶದಲ್ಲಿ ಯಾರೂ ಮಾಡಿರದ ಸಾಧನೆಯನ್ನು ಹುಬ್ಬಳ್ಳಿಯ ವೈದ್ಯರೊಬ್ಬರು ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.

ನಗರದ ಖ್ಯಾತ ಲೇಸರ್ ದಂತ ವೈದ್ಯ ಡಾ.‌ಚಂದ್ರಶೇಖರ್ ಯಾವಗಲ್ ಅವರು, ದೇಶದಲ್ಲಿ ಯಾವ ವೈದ್ಯರು‌ ಕೂಡ ಮಾಡದ ಸಾಧನೆ ಮಾಡುವ ಮೂಲಕ ಅಮೇರಿಕಾದ ಫೋರ್ಬ್ಸ್ ಮ್ಯಾಗಜೀನ್ ನಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ದಾರೆ.

ದಂತ ವೈದ್ಯರು ‌ಅಂದ್ರೆ ಹಲ್ಲು ಕೀಳುವವರು, ನೋವು ಕೊಡುವವರು ಎಂಬ ಅಪಾದನೆಯನ್ನು ಮೆಟ್ಟಿ ನಿಂತು ದಂತ ವೈದ್ಯರ ಅನುಕೂಲಕ್ಕಾಗಿ ಲೇಸರ್ ಸಾಧನ‌ವನ್ನು ಅವಿಷ್ಕಾರ ಮಾಡಿದ್ದಾರೆ. ಈ‌ ಮೂಲಕ‌ ನೋವು ರಹಿತ ದಂತ ಚಿಕಿತ್ಸೆಗೆ ಮಹತ್ವದ ‌ಕೊಡುಗೆ ನೀಡಿದ್ದಾರೆ.

ಹುಬ್ಬಳ್ಳಿಯ ವಿದ್ಯಾನಗರದವರಾದ ಡಾ.ಚಂದ್ರಶೇಖರ್ ಯಾವಗಲ್ ಅವರು, ದಂತ ವೈದ್ಯರು ಅನುಭವಿಸುವ ಕಷ್ಟಗಳು ಹಾಗೂ ತಾವು ತಮ್ಮ ವೈದ್ಯಕೀಯ ಜೀವನದಲ್ಲಿ ಕಂಡ ನೋವುಗಳು ಹಾಗೂ ಅನುಭವಗಳನ್ನು ಕ್ರೋಢೀಕರಿಸಿ ಹೊಸ ಲೇಸರ್ ಉಕರಣಗಳನ್ನು ಸಿದ್ಧಪಡಿಸಿ ತಮ್ಮ ಹೆಸರಿನಲ್ಲಿ ‌ಪೇಟೆಂಟ್ ಮಾಡಿಸಿದ್ದಾರೆ.

ತಮ್ಮ ಲೇಸರ್ ಉದ್ಯಮ ನೋವಾಲಾಸ್ ಸಂಸ್ಥೆಯ ಮೂಲಕ ಅವಿಷ್ಕರಿಸಿದ ಸುಧಾರಿತ ಅತ್ಯಾಧುನಿಕ ಲೇಸರ್ ಉಪಕರಣಗಳು ದೇಶ ಹಾಗೂ ಅಂತರಾಷ್ಟ್ರೀಯ ‌ಮಟ್ಟದಲ್ಲಿ ದಂತವೈದ್ಯ ವೃತ್ತಿಯಲ್ಲಿ ಅತ್ಯುತ್ತಮ ಪರಿವರ್ತನೆಗೆ ಕಾರಣವಾಗಿದೆ.

ಇವರ ಈ ಸಾಧನೆಯನ್ನು ಫೊರ್ಬ್ಸ್ ಮ್ಯಾಗಜೀನ್ ‌ಕೊಂಡಾದಿದೆ. ಡಾ.‌ಚಂದ್ರಶೇಖರ್ ಅವರು ಹುಬ್ಬಳ್ಳಿಯ ಬಿಡಿಎಸ್ನಲ್ಲಿ ವಿಶ್ವವಿದ್ಯಾನಿಲಯದ ಅಗ್ರಸ್ಥಾನ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ, ಮಕ್ಕಳ ದಂತವೈದ್ಯಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದು ವಿದೇಶದಲ್ಲಿ ಲೇಸರ್ ಕುರಿತಂತೆ ಉನ್ನತ ವ್ಯಾಸಂಗ ಪೂರೈಸಿದ್ದಾರೆ.

ಮೊದಲು 2006 ರಲ್ಲಿ ಲೇಸರ್ ತಜ್ಞರಾಗಿ ತಮ್ಮ ವೃತ್ತಿ ಪಯಣ ಪ್ರಾರಂಭಿಸಿದ ಡಾ. ಯಾವಗಲ್ ಅವರು 350 ರೂಪಾಯಿಗೆ ಲೇಸರ್ ‌ಕಿಟ್ ನ್ನು ಬಾಡಿಗೆ ಪಡೆದು ವೈದ್ಯಕೀಯ ಸೇವೆ ಮಾಡಿದ್ದನ್ನು ನೆನಪಿಸಿಕೊಳ್ತಾರೆ.

ಲೇಸರ್ ತಂತ್ರಜ್ಞಾನವು ಹೆಚ್ಚು ಕೈಗೆಟುಕುವಂತಾಗಬೇಕು. ಸಾಮಾನ್ಯ ಭಾರತೀಯ ವೈದ್ಯರು ಅದನ್ನು ಬಳಸಬೇಕು. ಆಗ ಮಾತ್ರ ಬಡ ಭಾರತೀಯ ರೋಗಿಗಳು ಈ ನಂಬಲಾಗದ ವಿಜ್ಞಾನದ ಲಾಭವನ್ನು ಪಡೆಯಬಹುದು ಎಂಬ ಉದ್ದೇಶದಿಂದ ಆತ್ಮನಿರ್ಭರ್, ‘ಮೇಡ್ ಇನ್ ಇಂಡಿಯಾ’ ಕಲ್ಪನೆ ಸಾಕಾರಗೊಳಿಸಲು ನೊವೊಲೇಸ್ ಅಲ್ಟ್ರಾ-ಆಧುನಿಕ ಕ್ಲಿನಿಕಲ್ ಲೇಸರ್ ಸಾಧನಗಳು ಮತ್ತು ಪರಿಕರಗಳನ್ನು ಪೋರ್ಟಬಲ್, ದಕ್ಷತಾಶಾಸ್ತ್ರ ಮತ್ತು ಅತ್ಯುತ್ತಮ ಅಂತರರಾಷ್ಟ್ರೀಯ ಸುರಕ್ಷತಾ ಮಾನದಂಡಗಳಿಗೆ ಅನುಸಾರವಾಗಿ ಉತ್ಪಾದಿಸುತ್ತಿದ್ದಾರೆ.‌ ಇವರ ಈ‌ ಕಾರ್ಯ ಮುಂದುವರೆದು ದೇಶದ ವೈದ್ಯಕೀಯ ‌ಕ್ಷೇತ್ರಕ್ಕೆ ಇನ್ನು ಉತ್ತಮ ಸೇವೆ‌ ನೀಡಲಿ‌ ಎಂಬುದು ನಮ್ಮ ಆಶಯ...!

Edited By : Manjunath H D
Kshetra Samachara

Kshetra Samachara

12/01/2021 03:39 pm

Cinque Terre

63.75 K

Cinque Terre

19

ಸಂಬಂಧಿತ ಸುದ್ದಿ