ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಿಲ್ಲರ್ ಕೊರೋನಾ ವೈರಸ್ ಬಗ್ಗೆ ಜಾಗೃತಿ: 500 ಮಾಸ್ಕ್ ವಿತರಿಸಿದ ಪ್ರಕೃತಿ ಸೇವಾ ಟ್ರಸ್ಟ್....!

ಧಾರವಾಡ: ಕಿಲ್ಲರ್ ಕೊರೋನಾ ವೈರಸ್ ಭೀತಿ ಹಿನ್ನಲೆಯಲ್ಲಿ ಜನರನ್ನು ಸಾಕಷ್ಟು ಆತಂಕ ಹಾಗೂ ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡಿರುವ ಮಹಾಮಾರಿಯಿಂದ ಜೀವನ ರಕ್ಷಣೆ ಮಾಡಿಕೊಳ್ಳುವ ಸದುದ್ದೇಶದಿಂದ ಪ್ರಕೃತಿ ಸೇವಾ ಟ್ರಸ್ಟ್ ಹಾಗೂ ನೌಕರಿ ಸಿದ್ಧಿ ರಸ್ತು ಸಂಸ್ಥೆಯ ವತಿಯಿಂದ ಸುಮಾರು ಐದು ನೂರಕ್ಕೂ ಹೆಚ್ಚು ಮಾಸ್ಕ್ ಗಳನ್ನು ವಿತರಣೆ ಮಾಡಲಾಯಿತು.

ಪ್ರಕೃತಿ ಸೇವಾ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಬಜಾಜ್ ನೇತೃತ್ವದಲ್ಲಿ ಸುಮಾರು ಐದು ನೂರು ಮಾಸ್ಕ್ ಗಳನ್ನು ವಿತರಣೆ ಮಾಡುವ ಮೂಲಕ ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಮನವಿ ಮಾಡಲಾಯಿತು.

ಇನ್ನೂ ಧಾರವಾಡ ಉಪ ನೋಂದಣಾಧಿಕಾರಿ ಗಿರೀಶ್ ಅರಮನಿ ಹಾಗೂ ನಾಯಕ ಅವರ ಸಹಯೋಗದೊಂದಿಗೆ ಉಪ ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ಮಾಸ್ಕ್ ವಿತರಣೆ ಮಾಡಿ ಕೋವಿಡ್ ಮಹಾಮಾರಿಯಿಂದ ಜೀವ ರಕ್ಷಣೆ ಮಾಡಿಕೊಳ್ಳಲು ಸಲಹೆ ನೀಡಿದರು. ಈಗಾಗಲೇ ಸಾಕಷ್ಟು ಜನಪರ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಪ್ರಕೃತಿ ಸೇವಾ ಟ್ರಸ್ಟ್ ಈಗ ಸಾರ್ವಜನಿಕ ಸೇವೆಗೆ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.

Edited By : Manjunath H D
Kshetra Samachara

Kshetra Samachara

02/09/2021 06:56 pm

Cinque Terre

51.83 K

Cinque Terre

3

ಸಂಬಂಧಿತ ಸುದ್ದಿ