ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಮಡೊಳ್ಳಿ, ಸವಣೂರು ಗ್ರಾಮಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮರು ಮಂಜೂರು: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮ ಮತ್ತು ಹಾವೇರಿ ಜಿಲ್ಲಾ ಸವಣೂರ ತಾಲೂಕ ಹುರಳಿಕುಪ್ಪೆ ಗ್ರಾಮಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮರು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪ್ರಹ್ಲಾದ್ ಜೋಶಿ ಅವರು, ಧಾರವಾಡ ಲೋಕಸಭಾ ಕ್ಷೇತ್ರದ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮ ಮತ್ತು ಹಾವೇರಿ ಜಿಲ್ಲಾ ಸವಣೂರ ತಾಲೂಕ ಹುರಳಿಕುಪ್ಪೆ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ 2012ರಲ್ಲಿ ಆದೇಶ ಹೊರಡಿಸಿತ್ತು. ಆದರೆ ನಂತರ ಬಂದ ಆಗಿನ ರಾಜ್ಯ ಸರ್ಕಾರ 2014ರಲ್ಲಿ ಆದೇಶ ಹಿಂಪಡೆದು ಈ ಆರೋಗ್ಯ ಕೇಂದ್ರಗಳ ಆದೇಶವನ್ನು ರದ್ದುಪಡಿಸಿತ್ತು. ಇದರಿಂದ ಗ್ರಾಮದ ಜನರಿಗೆ ಅನಾನುಕೂಲವಾಗಿದ್ದರಿಂದ ನಾನು (ಪ್ರಹ್ಲಾದ ಜೋಶಿ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ. ಕೆ.ಸುಧಾಕರ ಅವರಿಗೆ ಈ ಆರೋಗ್ಯ ಕೇಂದ್ರಗಳನ್ನು ಪುನರ್ ಪ್ರಾರಂಭಿಸಲು ಆದೇಶಿಸುವಂತೆ ವಿನಂತಿದ್ದೆ. ಈ ಮೇರೆಗೆ ಈಗ ಎರಡು ಆರೋಗ್ಯ ಕೇಂದ್ರಗಳು ಪುನಃ ಪ್ರಾರಂಭವಾಗಲಿದೆ. ರಾಜ್ಯ ಸರಕಾರ ಈ ಕುರಿತು ಆದೇಶ ಹೊರಡಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಸದರಿ ಆದೇಶ ಪಟ್ಟಿಯಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕಮಡೊಳ್ಳಿ ಹಾಗೂ ಸವಣೂರು ತಾಲೂಕಿನ ಹುರಳಿಕುಪ್ಪೆ ಗ್ರಾಮಗಳು ಸೇರ್ಪಡೆಗೊಂಡಿವೆ ಎಂದು ತಿಳಿಸಿದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

'ನನ್ನ ವಿನಂತಿಯ ಮೇರೆಗೆ ಈಗ ಈ ಎರಡು ಆರೋಗ್ಯ ಕೇಂದ್ರಗಳು ಮಂಜೂರಾಗಿದ್ದು, ಇದರಿಂದ ಜಿಲ್ಲಾಸ್ಪತ್ರೆಗಳಿಗೆ ಹೆಚ್ಚಿನ ಸೇವೆಗಳಿಗೆ ಅಲೆದಾಡುವುದು ತಪ್ಪಿದಂತಾಗುತ್ತದೆ. ಈ ದೃಷ್ಟಿಯಿಂದ ಉತ್ತಮ ಸೇವೆಗಳು ಎಲ್ಲ ಹಂತಗಳ ಆರೋಗ್ಯ ಕೇಂದ್ರಗಳಲ್ಲಿ ದೊರಕುವಂತಾಗಬೇಕು' ಎಂಬ ದೃಷ್ಟಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ವಿನಂತಿಸಿದ್ದೆ ಎಂದು ಹೇಳಿದ್ದಾರೆ.

ಕಮಡೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಒಡೆತನದ ಎರಡು ಎಕರೆ ಜಮೀನು ನೀಡಿದ್ದು, ಈ ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡಿದ ಬೊಮ್ಮಾಯಿ ಅವರಿಗೆ ಹಾಗೂ ಆರೋಗ್ಯ ಸಚಿವ ಸುಧಾಕರ ಅವರಿಗೆ ಧನ್ಯವಾದಗಳನ್ನು ಕೇಂದ್ರ ಸಚಿವರು ಜೋಶಿ ತಿಳಿಸಿದ್ದಾರೆ.

Edited By : Vijay Kumar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/10/2022 08:15 pm

Cinque Terre

37.19 K

Cinque Terre

2

ಸಂಬಂಧಿತ ಸುದ್ದಿ