ಕುಂದಗೋಳ : ತಂಬಾಕು ಉತ್ಪನ್ನಗಳ ಪ್ರಚೋದನಕಾರಿ ಮಾರಾಟ ಹಾಗೂ 18 ವರ್ಷ ವಯಸ್ಸಿನ ಒಳಗಿನವರಿಗೆ ತಂಬಾಕು ಉತ್ಪನ್ನ ಮಾರಾಟ ಮಾಡದಂತೆ, ಕೋವಿಡ್ ನಿಯಮಾವಳಿ ಪಾಲಿಸುವಂತೆ ಇಂದು ಕುಂದಗೋಳ ಪಟ್ಟಣದಲ್ಲಿ ಗುಲಾಬಿ ಆಂದೋಲನ ಕೈಗೊಂಡು ಜಾಗೃತಿ ಮೂಡಿಸಲಾಯಿತು.
ಹೌದು ! ತಾಲೂಕು ಕಾನೂನು ಸಮಿತಿ, ಆರೋಗ್ಯ ಇಲಾಖೆ ಸೇರಿದಂತೆ ತಾಲೂಕಿನ ಎಲ್ಲ ಇಲಾಖೆಗಳ ಸಹಭಾಗಿತ್ವದಲ್ಲಿ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಹಾಗೂ ನ್ಯಾಯಾಧೀಶ ಪಿ.ಜೆ.ಪರಮೇಶ್ವರ ನೇತೃತ್ವದಲ್ಲಿ ಜಾಗೃತಿ ಜಾಥಾ ಕೈಗೊಂಡು ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ಅರಿವು ಮೂಡಿಸಲಾಯಿತು.
ಗುಲಾಬಿ ಆಂದೋಲನ ಮೂಲಕ ಎಲ್ಲ ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ಗುಲಾಬಿ ಹೂ ನೀಡಿ ವ್ಯಸನ ಮುಕ್ತ ಯುವ ಪೀಳಿಗೆಗಾಗಿ ಯಶಸ್ವಿ ಜಾಥಾ ಕೈಗೊಳ್ಳಲಾಯಿತು.
Kshetra Samachara
07/01/2022 03:47 pm