ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮೋದಿಯವರ ನಾಯಕತ್ವದಲ್ಲಿ ಕೊರೊನಾ ಲಸಿಕೆ ವಿತರಣೆ ಸಾರ್ವಜನಿಕರಲ್ಲಿ ಮೂಡಿಸಿದ ವಿಶ್ವಾಸ- ಶೆಟ್ಟರ್

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ 10 ಕೇಂದ್ರಗಳಲ್ಲಿ ವ್ಯಾಕ್ಸಿನ್ ವಿತರಣೆ ಮಾಡಲಾಗುತ್ತಿದ್ದು, ಸುಮಾರು 11 ಲಸಿಕೆಗಳು ಜಿಲ್ಲೆಗೆ ಬಂದಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಕೊರೊನಾ ಹಾವಳಿ ತಪ್ಪಿಸಲು ಸಾಕಷ್ಟು ಪ್ರಯತ್ನ ಮಾಡಿತ್ತಿದ್ದಾರೆ. ಬೇರೆ ದೇಶದಲ್ಲಿ ಎರಡನೇ ಅಲೆ ಕೊರೊನಾ ಪ್ರಾರಂಭವಾಗಿದೆ‌‌. ಇನ್ನೂ ಅಲ್ಲಿ ಎರಡನೆಯ ಹಂತದ ಲಾಕಡೌನ್ ಮಾಡಲು ಸಿದ್ದತೆ ನಡೆಸಿದೆ. ಅಂತರದಲ್ಲಿ ನಮ್ಮ ದೇಶ ಕೊರೊನಾ ತಡೆಗಟ್ಟುವ ಕೆಲಸ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ನೂರಂಕ್ಕಿಂತ ಇಳಿಕೆ ಕಂಡಿದೆ. ಜಗತ್ತಿನಲ್ಲಿ ಕೊರೋನಾ ಲಸಿಕೆ ಸಂಶೋಧನೆಯನ್ನು ಮೊಟ್ಟಮೊದಲ ಬಾರಿಗೆ ಲಸಿಕೆ ಸಂಶೋಧನೆ ಮಾಡಿ ವಿತರಣಾ ಮಾಡಿದ ದೇಶ ಅಂದ್ರೆ ನಮ್ಮ ದೇಶ. ಆಡಳಿತ ಮಂಡಳಿ ಜಿಲ್ಲೆಗಳಿಗೆ ಸಮಗ್ರವಾಗಿ ಹಂಚಿಕೆ ಮಾಡಿ ಜಿಲ್ಲೆಗಳಿಂದ ತಾಲೂಕಿನ 10 ಕೇಂದ್ರಗಳಲ್ಲಿ ಲಸಿಕೆ ನೀಡಲು ಸಿದ್ದತೆ ನಡೆಸಿದೆ‌ ಎಂದರು.

ಮೊದಲ ಹಂತದಲ್ಲಿ ಕಿಮ್ಸ್ 3500 ಕೊರೊನಾ ವಾರಿಯರ್ಸ್‌ ಲಸಿಕೆ ನೀಡಿದ್ದು, ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಲಸಿಕೆ ವಿತರಣೆ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಲಸಿಕೆ ವಿತರಣೆ ನಂತರ ದೇಶದಲ್ಲಿ ಕೊರೊನಾ ಮುಕ್ತವಾಗುವುದರ ಜೊತೆಗೆ ಜನರಲ್ಲಿ ವಿಶ್ವಾಸ ಮೂಡುತ್ತದೆ ಎಂದರು....

Edited By : Manjunath H D
Kshetra Samachara

Kshetra Samachara

16/01/2021 02:18 pm

Cinque Terre

49.12 K

Cinque Terre

3

ಸಂಬಂಧಿತ ಸುದ್ದಿ