ಧಾರವಾಡ: ಜಗತ್ತನ್ನು ತಲ್ಲಣಗೊಳಿಸಿರುವ ಕೊರೊನಾಕ್ಕೆ ಈಗಾಗಲೇ ಔಷಧಿ ಸಿದ್ಧವಾಗಿದ್ದು, ಕರ್ನಾಟಕದಲ್ಲೂ ಕೊರೊನಾ ವ್ಯಾಕ್ಸಿನ್ ಡ್ರೈ ರನ್ ಗೆ ಚಾಲನೆ ನೀಡಲಾಗಿದೆ.
ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲೂ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರು ಕೊರೊನಾ ವ್ಯಾಕ್ಸಿನ್ ಡ್ರೈ ರನ್ ಗೆ ಚಾಲನೆ ನೀಡಿದರು. ಅಲ್ಲದೇ ಕೊರೊನಾ ವ್ಯಾಕ್ಸಿನೇಷನ್ ನೀಡಲು ಸಿದ್ಧಪಡಿಸಲಾಗಿರುವ ಮೂರು ಕೊಠಡಿ ಹಾಗೂ ಉಪಕರಣಗಳನ್ನು ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಹಂತದಲ್ಲಿ 22 ಸಾವಿರ ಜನರಿಗೆ ಜಿಲ್ಲೆಯಲ್ಲಿ ಕೊರೊನಾ ವ್ಯಾಕ್ಸಿನ್ ನೀಡುವ ಗುರಿ ಹೊಂದಲಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ 8 ಕಡೆಗಳಲ್ಲಿ ವ್ಯಾಕ್ಸಿನ್ ಡ್ರೈ ರನ್ ಮಾಡಲಾಗುತ್ತಿದೆ. ಒಂದು ವೇಟಿಂಗ್ ರೂಮ್, ಒಂದು ರಿಜಿಸ್ಟ್ರೇಶನ್ ರೂಮ್ ಹಾಗೂ ಒಂದು ವ್ಯಾಕ್ಸಿನ್ ರೂಮು ಮಾಡಲಾಗಿದ್ದು, ವ್ಯಾಕ್ಸಿನ್ ಕೊಟ್ಟ ಮೇಲೆ ಏನಾದರೂ ಸೈಡ್ ಎಫೆಕ್ಟ್ ಗಳಾದರೆ ಅದಕ್ಕೂ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಇನ್ನು ಕೆಲವೇ ದಿನಗಳಲ್ಲಿ ವ್ಯಾಕ್ಸಿನ್ ಬರುವ ನಿರೀಕ್ಷೆ ಇದೆ. ಯಾವುದೇ ಸೈಡ್ ಎಫೆಕ್ಟ್ ಆಗುವುದಿಲ್ಲ ಎಂಬ ಭರವಸೆ ಇದೆ ಎಂದರು.
ಈಗಾಗಲೇ ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ವ್ಯಾಕ್ಸಿನ್ ಡ್ರೈ ರನ್ ಗೆ ಚಾಲನೆ ನೀಡಿರುವ ಜಿಲ್ಲಾಧಿಕಾರಿ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲೂ ಈ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.
Kshetra Samachara
08/01/2021 11:42 am