ಹುಬ್ಬಳ್ಳಿ : ಕೊರೋನಾ ಹಾವಳಿ ನಂತರ ರಾಜ್ಯಕ್ಕೆ ಓಮ್ರಿಕಾನ್ ಕಾಲಿಟ್ಟಿದ್ದಾಗ ಜನರಲ್ಲಿ ಭಯ ಉಂಟಾಗಿತ್ತು. ಆದರೆ ಇದೀಗ ವೈರಸ್ ಗಳ ಹಾವಳಿ ಕೊಂಚ ಇಳಿಮುಖ ಖಂಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಲು ಆದೇಶ ಹೊರಡಿಸಿತ್ತು. ವೃದ್ದರಿಗೆ ಆಸ್ಪತ್ರೆಗೆ ಹೋಗಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಆಗದಿರದಿಂದ ಚಿಟಗುಪ್ಪಿ ಆಸ್ಪತ್ರೆ ವೈದ್ಯರು ವೃದ್ದರಿಗಾಗಿ ಒಂದು ಕಂಟ್ರೋಲ್ ರೂಂ ನಂಬರನ್ನು ಮಾಡಿ ಅವರಿಗೆ ಮನೆ ಮನೆಗೆ ಹೋಗಿ ಡೋಸ್ ಹಾಕುವ ವ್ಯವಸ್ಥೆ ಮಾಡಿದ್ದು ವೃದ್ಧರಲ್ಲಿ ಸಂತಸ ಮೂಡಿದೆ..
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯಿಂದ ಮನೆ ಮನೆಗೆ ತೆರಳಿ ವೃದ್ದರಿಗೆ ವ್ಯಾಕ್ಸಿನ್ ಹಾಕುತ್ತೀರುವುದು ತುಂಬ ಅನುಕೂಲವಾಗಿದೆ. ವೃದ್ಧರು ಮನೆಯಿಂದ ಹೊರಗಡೆ ಓಡಾಡಲು ತೊಂದರೆಯಾಗುವ ಉದ್ದೇಶದಿಂದ ಚಿಟಗುಪ್ಪಿ ಆಸ್ಪತ್ರೆ ಈ ನಿರ್ಧಾರ ತೆಗೆದುಕೊಂಡಿದೆ. ಚಿಟಗುಪ್ಪಿ ಆಸ್ಪತ್ರೆಯ ಕಂಟ್ರೋಲ್ ರೂಂ 0836- 2213888, 2213869 ಗೆ ಕರೆ ಮಾಡಿದರೆ ಸಾಕು, ಅವರ ಮನೆಗೆ ಹೋಗಿ ವ್ಯಾಕ್ಸಿನ್ ಹಾಕುತ್ತಾರೆ. ಈಗಾಗಲೇ ಪ್ರತಿ ದಿನ ನೂರಾರು ಜನರು ಕರೆ ಮಾಡಿ ಉಪಯೋಗ ಪಡೆದುಕೊಳ್ಳುತ್ತಿದ್ದಾರೆಂದು ವೈದ್ಯರು ಹೇಳುತ್ತಾರೆ.
Kshetra Samachara
07/02/2022 02:18 pm